alex Certify ಹೊಸ ಮಾರ್ಗಸೂಚಿ ಕಾರಣ ಅಮಿತಾಬ್ ಕೈ ತಪ್ಪುತ್ತಿದೆ 5 ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಮಾರ್ಗಸೂಚಿ ಕಾರಣ ಅಮಿತಾಬ್ ಕೈ ತಪ್ಪುತ್ತಿದೆ 5 ಚಿತ್ರ

ಕೊರೊನಾ ವೈರಸ್ ಚಲನಚಿತ್ರದ ಮೇಲೂ ಪ್ರಭಾವ ಬೀರಿದೆ. ಹಾಗೆ ಹಿರಿಯ ನಟ 77 ವರ್ಷದ ಅಮಿತಾಬ್ ಬಚ್ಚನ್ ಕೂಡ ಇದ್ರಿಂದ ತೊಂದರೆಗೀಡಾಗಿದ್ದಾರೆ. ಅಮಿತಾಬ್ ಬಚ್ಚನ್ ಐದು ಚಿತ್ರಗಳು ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದೆ.

ಅಮಿತಾಬ್ ಸಹಿ ಹಾಕಿದ್ದ ಕೆಲ ಚಿತ್ರಗಳ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಮತ್ತೆ ಕೆಲ ಚಿತ್ರಗಳು ಅರ್ಧಕ್ಕೆ ನಿಂತಿವೆ. ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದು ಈಗ ಸಂಕಷ್ಟಕ್ಕೆ ಕಾರಣವಾಗಿದೆ. ಲಾಕ್ ಡೌನ್ 5ರಲ್ಲಿ ಶೂಟಿಂಗ್ ಶುರುವಾಗಲಿದೆ. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೆಲ ನಿಯಮಗಳನ್ನು ಕಡ್ಡಾಯ ಮಾಡಲಾಗಿದೆ. ಅದ್ರಲ್ಲಿ 60 ವರ್ಷ ಮೇಲ್ಪಟ್ಟ ಕಲಾವಿದರನ್ನು ಮೂರು ತಿಂಗಳು ಶೂಟಿಂಗ್ ನಿಂದ ಹೊರಗೆ ಇಡುವಂತೆ ಸೂಚಿಸಲಾಗಿದೆ.

77ರ ಗಡಿ ದಾಡುತ್ತಿರುವ ಅಮಿತಾಬ್ ಈ ಹೊಸ ಮಾರ್ಗಸೂಚಿ ಕಾರಣ ಶೂಟಿಂಗ್ ಗೆ ಬರುವಂತಿಲ್ಲ. ಸೋನಿ ಟಿವಿಯಲ್ಲಿ ಕೌನ್ ಬನೇಗಾ ಕರೋಡಪತಿ ಪ್ರಶ್ನೆಗಳನ್ನು ಕೇಳಲಾಗ್ತಿದೆ. ಅಮಿತಾಬ್ ಮನೆಯಲ್ಲಿಯೇ ಶೂಟಿಂಗ್ ಮಾಡಿದ್ದರು. ಆದ್ರೆ ಶೋ ಶುರುವಾಗ್ತಿದ್ದಂತೆ ಸ್ಟುಡಿಯೋಗೆ ಬರಬೇಕು. ನಿರ್ಮಾಪಕರು ಶೋಗೆ ಬೇರೆ ನಿರೂಪಕರನ್ನು ಹುಡುಕುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...