alex Certify ಪತಿ ಕೊಹ್ಲಿ ಎತ್ತಿದ ಅನುಷ್ಕಾ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಕೊಹ್ಲಿ ಎತ್ತಿದ ಅನುಷ್ಕಾ: ವಿಡಿಯೋ ವೈರಲ್

ತಾಯಿಯಾದ್ಮೇಲೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫಿಟ್ನೆಸ್ ಗೆ ಹೆಚ್ಚಿನ ಗಮನ ನೀಡಿದ್ದಾರೆ. ಜನವರಿಯಲ್ಲಿ ಮಗುವಿಗೆ ಜನ್ಮ ನೀಡಿದ ಅನುಷ್ಕಾ, ಎರಡು ತಿಂಗಳ ಬ್ರೇಕ್ ನಂತ್ರ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಅನುಷ್ಕಾ ಫಿಟ್ನೆಸ್ ಅಭಿಮಾನಿಗಳನ್ನು ದಂಗಾಗಿಸಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿರುವ ಅನುಷ್ಕಾ, ಪತಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಎತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ, ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ಬೇರೆಯವರ ಜೊತೆ ಮಾತನಾಡ್ತಿದ್ದಾರೆ. ಅವರ ಹಿಂದೆ ನಿಂತಿರುವ ಅನುಷ್ಕಾ, ಕೊಹ್ಲಿಯನ್ನು ಎತ್ತಿದ್ದಾರೆ. ಅನುಷ್ಕಾ ತಮ್ಮನ್ನು ಎತ್ತುತ್ತಿದ್ದಂತೆ ವಿರಾಟ್ ದಿಗ್ಭ್ರಮೆಗೊಂಡಿದ್ದಾರೆ.

ನಂತ್ರ ಮತ್ತೊಮ್ಮೆ ಎತ್ತುವಂತೆ ಕೊಹ್ಲಿ ಹೇಳ್ತಾರೆ. ಆಗ ಅನುಷ್ಕಾ, ಕೊಹ್ಲಿಯನ್ನು ಮತ್ತೆ ಎತ್ತುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ಅನುಷ್ಕಾ, ಇನ್ಸ್ಟಾಗ್ರಾಮ್ ನಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜನರ ನಡವಳಿಕೆ ವಿಚಿತ್ರವಾಗಿದೆ. ತಮ್ಮ ಬಗ್ಗೆ ಗಮನ ನೀಡುವ ಬದಲು ಬೇರೆಯವರ ನ್ಯೂನ್ಯತೆ ಎತ್ತಿ ಹಿಡಿಯುವುದ್ರಲ್ಲಿ ಸಮಯ ಹಾಳು ಮಾಡ್ತಿದ್ದಾರೆಂದು ಅನುಷ್ಕಾ ಬರೆದಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...