ಈ ವರ್ಷ ಬಾಲಿವುಡ್ ಗೆ ಒಂದಲ್ಲ ಒಂದು ಸಂಕಟ ಎದುರಾಗಿದೆ. ಅನೇಕ ದಿಗ್ಗಜರನ್ನು ಬಾಲಿವುಡ್ ಕಳೆದುಕೊಂಡಿದೆ. ಇದ್ರ ಜೊತೆಗೆ ಡ್ರಗ್ಸ್ ಸೇರಿದಂತೆ ಅನೇಕ ಸಮಸ್ಯೆಗಳು ಬಾಲಿವುಡ್ ನಲ್ಲಿ ಎದುರಾಗಿದೆ.
ಈಗ ಬಾಲಿವುಡ್ ನಲ್ಲಿ ವಿಷಾದಕರ ಘಟನೆ ನಡೆದಿದೆ. ಗಾಯಕಿ ಅನುರಾಧಾ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಮಾಹಿತಿಯ ಪ್ರಕಾರ, ಆದಿತ್ಯ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅನೇಕ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಆದಿತ್ಯ ಪೌಡ್ವಾಲ್ ಅವರ ತಾಯಿ ಅನುರಾಧಾ ಪೌಡ್ವಾಲ್ ಪ್ರಸಿದ್ಧ ಹಾಡುಗಾರ್ತಿ. ಅನೇಕ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಕಡಿಮೆ ವಯಸ್ಸಿನಲ್ಲಿಯೇ ಕಿರಿಯ ಸಂಗೀತ ನಿರ್ದೇಶಕರಾಗಿ ಅವರ ಹೆಸರು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಸೇರಿದೆ.