![](https://kannadadunia.com/wp-content/uploads/2020/11/415c858d-88c6-479c-80c1-f726e1a55e36.jpg)
’ಕಿಲ್ ದಿನ್ ಲವ್’ ಹೆಸರಿನ ಹಿಟ್ ಟ್ರ‍್ಯಾಕ್ ಮೂಲಕ ಕೆ-ಪಾಪ್ ಗರ್ಲ್ ಬ್ಯಾಂಡ್ ಭಾರೀ ಜನಪ್ರಿಯತೆ ಗಿಟ್ಟಿಸಿದೆ. ಯೂಟ್ಯೂಬ್‌ನಲ್ಲಿ ಈ ಟ್ರ‍್ಯಾಕ್‌ನ ವೀವ್ಸ್ 1.1 ಶತಕೋಟಿ ದಾಟಿದೆ.
ಬ್ಲಾಕ್‌ಪಿಂಕ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇರುವ ತಮ್ಮ ಖಾತೆಯ ಮೂಲಕ ವೀಕ್ಷಕರೊಂದಿಗೆ ಟಚ್‌ನಲ್ಲಿರುವ ಈ ಹುಡುಗಿಯರು, ಶತಕೋಟಿಗಿಂತ ಹೆಚ್ಚಿನ ವೀವ್ಸ್ ಸಿಕ್ಕಿದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಈ ಬ್ಯಾಂಡ್‌ನಲ್ಲಿ ಗಾಯಕಿಯರಾದ ಜೆನ್ನಿ, ರೋಸ್, ಲಿಸಾ ಹಾಗೂ ಜಿಸೂ ಸಹ ಇದ್ದು, ಇಂಥ ಸಾಧನೆಗೈದ ಹುಡುಗಿಯರ ಮೊದಲ ತಂಡವೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ’ಬೋಂಬಯಾ’ ಹಾಗೂ ’ಡ್ಡು-ಡು ಡ್ಡು-ಡು’ ಟ್ರ‍್ಯಾಕ್‌ಗಳು ಯೂಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿವೆ.
![](https://kannadadunia.com/wp-content/uploads/2020/11/b8943431-8812-4019-8242-7b384eccaa9a-1.jpg)