alex Certify ಮಾನವನ ಅಸ್ಥಿ ಪಂಜರದಿಂದ ಸಿದ್ದವಾಗಿದೆ ಗಿಟಾರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವನ ಅಸ್ಥಿ ಪಂಜರದಿಂದ ಸಿದ್ದವಾಗಿದೆ ಗಿಟಾರ್​..!

ಸಂಗೀತಗಾರರು ಅಂದಮೇಲೆ ಅವರಿಗೆ ಸಂಗೀತ ಸಾಧನಗಳ ಮೇಲೆ ಸಿಕ್ಕಾಪಟ್ಟೆ ಮೋಹ ಇರುತ್ತೆ. ಕೆಲ ಸಂಗೀತ ಪಂಡಿತರಂತೂ ತಮಗೆ ಬೇಕಾದ ರೀತಿಯಲ್ಲಿ ಸಂಗೀತ ಸಾಧನಗಳನ್ನ ವಿನ್ಯಾಸ ಮಾಡಿಕೊಳ್ತಾರೆ.

ಅದೇ ರೀತಿ ಪ್ರಿನ್ಸ್​ ಮಿಡ್​ನೈಟ್​ ಎಂಬ ಸಂಗೀತಗಾರ ಕೂಡ ವಿಭಿನ್ನ ವಿನ್ಯಾಸದ ಸಂಗೀತ ಸಾಧನವನ್ನ ವಿನ್ಯಾಸಗೊಳಿಸಿದ್ದು ಇದನ್ನ ಕಂಡ ನೆಟ್ಟಿಗರು ಶಾಕ್​ ಆಗಿದ್ದಾರೆ.

ಯಾಕಂದ್ರೆ ಈತ ಯಾವುದೋ ಲೋಹಗಳನ್ನ ಬಳಸಿ ಈ ಸಾಧನವನ್ನ ತಯಾರಿಸಿಲ್ಲ. ಬದಲಾಗಿದೆ ತನ್ನ ಮೃತ ಸಂಬಂಧಿಯ ಅಸ್ತಿ ಪಂಜರವನ್ನ ಬಳಸಿ ಈ ವಿನ್ಯಾಸದ ಸಂಗೀತ ಸಾಧನವನ್ನ ರಚಿಸಿದ್ದಾನೆ.

ಈತನ ಸಂಬಂಧಿಯೊಬ್ಬರು ಸತ್ತು ಹೋಗಿದ್ದ ವೇಳೆ ಅವರ ದೇಹದ ಅಂತ್ಯಕ್ರಿಯೆ ಮಾಡೋದ್ರ ಬದಲು ಅವರ ದೇಹದಲ್ಲಿರುವ ಅಸ್ಥಿ ಪಂಜರವನ್ನ ಬಳಿಸಿಕೊಂಡು ವಿಭಿನ್ನ ವಿನ್ಯಾಸದ ಸಂಗೀತ ಸಾಧನವನ್ನ ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದನಂತೆ. ಈತ ಈ ವಿಶೇಷ ವಿನ್ಯಾಸದ ಗಿಟಾರ್​ ಬಳಸಿ ಸಂಗೀತ ನುಡಿಸಿದ್ದು ಇದರ ವಿಡಿಯೋವನ್ನ ಯುಟ್ಯೂಬ್​​ನಲ್ಲಿ ಶೇರ್​ ಮಾಡಿದ್ದಾನೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...