
ಬಿಹಾರ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. 49 ಅಭ್ಯರ್ಥಿಗಳಿರುವ ಈ ಪಟ್ಟಿಯಲ್ಲಿ ನಟ ಹಾಗೂ ಮಾಜಿ ಸಂಸದ ಶತ್ರುಘ್ನ ಸಿನ್ಹಾರ ಪುತ್ರ ಲವ್ ಸಿನ್ಹಾರನ್ನು ಬಂಕಿಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಇದೇ ವೇಳೆ ಜೆಡಿಯು ನಾಯಕ ಶರದ್ ಯಾದವ್ ಪುತ್ರಿ ಸುಭಾಷಿಣಿ ಯಾದವ್ ಬಿಹಾರಿಗಂಜ್ ಕ್ಷೇತ್ರದಿಂದ ಸ್ಫರ್ಧೆಗಿಳಿಯಲಿದ್ದಾರೆ. ಸುಭಾಷಿಣಿ ಹಾಗೂ ಲೋಕ್ ಜನಶಕ್ತಿ ಪಾರ್ಟಿಯ ಕಾಲಿ ಪಾಂಡೆ ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡಿದ್ದರು.
ನವೆಂಬರ್ 3 & 7ರಂದು ನಡೆಯಲಿರುವ ಮತದಾನ ಎರಡನೇ ಹಂತಕ್ಕೆ ಮೇಲ್ಕಂಡ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.