alex Certify ‘ಬಿಗ್ ಬಾಸ್’ ವೀಕ್ಷಕರಿಗೆ ಭರ್ಜರಿ ಸುದ್ದಿ: ಹೊಸ ಸೀಸನ್ ಶೀಘ್ರವೇ ಶುರು, 16 ಸೆಲೆಬ್ರಿಟಿಗಳು ಭಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್’ ವೀಕ್ಷಕರಿಗೆ ಭರ್ಜರಿ ಸುದ್ದಿ: ಹೊಸ ಸೀಸನ್ ಶೀಘ್ರವೇ ಶುರು, 16 ಸೆಲೆಬ್ರಿಟಿಗಳು ಭಾಗಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೋಸ್ಟ್ ಮಾಡುವ ‘ಬಿಗ್ ಬಾಸ್’ ಸೀಸನ್ 8 ಜನವರಿ ಮೂರನೇ ವಾರದಿಂದ ಆರಂಭವಾಗಲಿದೆ. ಈ ಬಾರಿ 16 ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗಿಯಾಗಲಿದ್ದಾರೆ.

ಕೊರೋನಾ ಕಾರಣದಿಂದ ಈ ಬಾರಿ ‘ಬಿಗ್ ಬಾಸ್’ ಆರಂಭವಾಗಿರಲಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನವರಿ ಮೂರನೇ ವಾರದಿಂದ ಸೀಸನ್ 8 ಆರಂಭವಾಗಲಿದೆ. 16 ಮಂದಿ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದು, ಸುದೀಪ್ ಅವರೇ ಈ ಸೀಸನ್ ನಿರೂಪಿಸಲಿದ್ದಾರೆ.

ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಈ ಬಗ್ಗೆ ಮಾತನಾಡಿ, ‘ಬಿಗ್ ಬಾಸ್’ ಸೀಸನ್ ಆರಂಭಿಸಲು ಸಿದ್ಧತೆಗಳು ಆರಂಭವಾಗಿವೆ. 100 ದಿನಗಳ ಕಾಲ ನಡೆಯಲಿರುವ ‘ಬಿಗ್ ಬಾಸ್’ ಸೀಸನ್ 8 ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಶೀಘ್ರವೇ ನೀಡಲಾಗುವುದು ಎಂದು ಹೇಳಿದ್ದಾರೆ.

ಬಿಡದಿಯಲ್ಲಿ ಬಿಗ್ ಬಾಸ್ ಮನೆಯ ಮರುನಿರ್ಮಾಣ ಕಾರ್ಯ ನಡೆದಿದ್ದು, ಡಿಸೆಂಬರ್ ಕೊನೆಯ ವೇಳೆಗೆ ಕೆಲಸಗಳು ಮುಗಿಯಲಿದ್ದು, ಸಂಕ್ರಾಂತಿ ನಂತರ ಜನವರಿ ಮೂರನೇ ವಾರದಲ್ಲಿ ಕೊರೋನಾ ಸುರಕ್ಷತಾ ನಿಯಮಗಳೊಂದಿಗೆ ಹೊಸ ಸೀಸನ್ ಶುರುವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...