alex Certify BIG BOSS ನಿಂದ ಬಂತು ಹೊಸ ಸುದ್ದಿ: ಸೀಸನ್​ 8 ರ ಮೊದಲ ಪ್ರೋಮೋ ರಿಲೀಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BOSS ನಿಂದ ಬಂತು ಹೊಸ ಸುದ್ದಿ: ಸೀಸನ್​ 8 ರ ಮೊದಲ ಪ್ರೋಮೋ ರಿಲೀಸ್​

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಹೆಸರು ಪಡೆದಿರುವ ಬಿಗ್​ ಬಾಸ್​ 8 ಕನ್ನಡ ಎಂಟ್ರಿ ಕೊಡೋಕೆ ಕೌಂಟ್​ಡೌನ್​ ಶುರುವಾಗಿದೆ. ಕಲರ್ಸ್​ ಕನ್ನಡ  ಅನುಬಂಧ ಅವಾರ್ಡ್ಸ್​ನಲ್ಲಿ ಬಿಗ್​ಬಾಸ್​ 8 ಬಗ್ಗೆ ಘೋಷಣೆ ಮಾಡಿದ್ದ ನಟ ಸುದೀಪ್​ ಇದೀಗ ಅಧಿಕೃತ ಪ್ರೋಮೋ ಮೂಲಕ ಕನ್ನಡಿಗರ ಮುಂದೆ ಬಂದಿದ್ದಾರೆ.

‘ಬಿಗ್ ಬಾಸ್’ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆಗೆ ಶರಣು

ಕಲರ್ಸ್ ಕನ್ನಡ ಹೆಡ್​ ಪರಮೇಶ್ವರ ಗುಂಡ್ಕಲ್​ ನೇತೃತ್ವದ ಬಿಗ್​ ಬಾಸ್​ ಕನ್ನಡ ಸೀಸನ್​ 8ನ ಮೊದಲ ಪ್ರೋಮೋ ಕಲರ್ಸ್ ಕನ್ನಡದ ಎಲ್ಲಾ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಹರಿಬಿಡಲಾಗಿದೆ. ಈಗಾಗಲೇ ಪರಮೇಶ್ವರ ಗುಂಡ್ಕಲ್​​ ಫೆಬ್ರವರಿಯಲ್ಲಿ ಬಿಗ್​ ಬಾಸ್​ ಸೀಸನ್​ 8 ಪ್ರೇಕ್ಷಕರನ್ನ ರಂಜಿಸೋಕೆ ಬರಲಿದೆ ಎಂದು ಹೇಳಿದ್ರು. ಈ ಹಿಂದೆ ಸುದೀಪ್​ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು.

ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ‘ಬಿಗ್ ಬಾಸ್’ ವೀಕ್ಷಿಸಿದ ರೋಗಿ…!

ಕಲರ್ಸ್ ಕನ್ನಡದ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಪ್ರೋಮೋ ರಿಲೀಸ್​ ಮಾಡ್ತಿದ್ದಂತೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಎಂದಿನಂತೆ ಬಿಗ್​ಬಾಸ್​ ನಿರೂಪಣೆಯ ಜವಾಬ್ದಾರಿ ಹೊತ್ತಿರುವ ಕಿಚ್ಚ ಸುದೀಪ್​ ಪ್ರೋಮೋದಲ್ಲಿ ಸಖತ್​ ಡ್ಯಾಶಿಂಗ್​ ಆಗಿ ಕಾಣುತ್ತಿದ್ದಾರೆ. ಸೀಸನ್​8 ಸ್ಪರ್ಧಿಗಳ ಬಗ್ಗೆ ಈಗಾಗಲೇ ಸಾಕಷ್ಟು ಊಹಾಪೋಹಗಳು ಹರಿದಾಡ್ತಾ ಇದ್ದು ಇನ್ನೇನು ಸದ್ಯದಲ್ಲೇ ಈ ಕುತೂಹಲಕ್ಕೂ ತೆರೆಬೀಳಲಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...