alex Certify ಹಿರಿಯ ನಟಿ ಭಾರ್ಗವಿ ನಾರಾಯಣ ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಟಿ ಭಾರ್ಗವಿ ನಾರಾಯಣ ನಿಧನ

ಬೆಂಗಳೂರು: ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ(84) ನಿಧನರಾಗಿದ್ದಾರೆ. ಸಂಜೆ 7.30 ರ ಸುಮಾರಿಗೆ ಬೆಂಗಳೂರಿನ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ನಟಿ ಸುಧಾ ಬೆಳವಾಡಿ ಮತ್ತು ನಟ ಪ್ರಕಾಶ್ ಬೆಳವಾಡಿಯವರ ತಾಯಿಯಾಗಿರುವ ಭಾರ್ಗವಿ ನಾರಾಯಣ್ ಅವರು ‘ಎರಡು ಕನಸು’, ‘ಪಲ್ಲವಿ ಅನುಪಲ್ಲವಿ’, ‘ಬಾ ನಲ್ಲೆ ಮಧುಚಂದ್ರಕೆ’ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಭಾರ್ಗವಿ ನಾರಾಯಣ್ ರಂಗಭೂಮಿ ಕಲಾವಿದರಾಗಿದ್ದು, ಹಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ಭಾರ್ಗವಿ ನಾರಾಯಣ್ ಅವರು 22 ಚಿತ್ರಗಳು, ದೂರದರ್ಶನದ ಸರಣಿಯ ಮಂಥನಾ ಮತ್ತು ಮುಕ್ತಾ ಧಾರಾವಾಹಿಗಳು ಸೇರಿದಂತೆ ಕನ್ನಡದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

4 ಫೆಬ್ರವರಿ, 1938 ರಂದು ಜನಿಸಿದ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಅವರ ಆತ್ಮಚರಿತ್ರೆ ‘ನಾನು, ಭಾರ್ಗವಿ’ 2012 ರಲ್ಲಿ ಬಿಡುಗಡೆಯಾಯಿತು,

ಪ್ರಶಸ್ತಿಗಳು

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ – ಅತ್ಯುತ್ತಮ ಪೋಷಕ ನಟಿ (1974 -75)

ಕರ್ನಾಟಕ ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿ (1998)

ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ

ಆಳ್ವಾಸ್ ನಡಿಸಿರಿ ಪ್ರಶಸ್ತಿ(2005)

ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ – ಅತ್ಯುತ್ತಮ ನಟಿ (ಎರಡು ಬಾರಿ)

ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ (1974 -75) – ರಾಜ್ಯ ಮಟ್ಟದ ಪ್ರಶಸ್ತಿ

ಚಲನಚಿತ್ರಗಳು

ಪ್ರೊಫೆಸರ್ ಹುಚ್ಚೂರಾಯ

ಪಲ್ಲವಿ

ಮುಯ್ಯಿ

ಅ೦ತಿಮ ಘಟ್ಟ

ಜ೦ಬೂ ಸವಾರಿ

ಕಾದ ಬೆಳದಿ೦ಗಳು

ಇದೊಳ್ಳೆ ರಾಮಾಯಣ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...