ಐರ್ಲೆಂಡ್‌ನಲ್ಲಿ ಮಾರ್ಚ್ 17ರಂದು ಸೇಂಟ್ ಪ್ಯಾಟ್ರಿಕ್ ದಿನಾಚರಣೆ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೇ ವೇಳೆ ಪಂಜಾಬಿ ಮೂಲದ ತಂಡವೊಂದು ಭರ್ಜರಿ ಭಾಂಗ್ರಾ ನೃತ್ಯದ ಮೂಲಕ ಐರಿಶ್ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ.
ಸೆಲ್‌ಬ್ರಿಡ್ಜ್‌ನ ಕ್ಯಾಸಲ್‌ಟೌನ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಂಗ್ರಾ ತಂಡವಾದ ಶಾಮ್ರಾಕ್ ಭಾಂಗ್ರಾದ ಮೂವರು ನೃತ್ಯಪಟುಗಳು ಪಂಜಾಬೀ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದು ಭಾಂಗ್ರಾ ಡೋಲಿನ ಜೊತೆಗೆ ಐರಿಷ್ ವಾದ್ಯಕ್ಕೆ ಸ್ಟೆಪ್ ಹಾಕುತ್ತಿರುವುದನ್ನ ನೋಡಬಹುದಾಗಿದೆ.
ಅವಧಿಪೂರ್ವ ಹೆರಿಗೆ: ಶೌಚಾಲಯದಲ್ಲಿ ಅವಳಿ ಮಗುವಿಗೆ ಜನ್ಮವಿತ್ತ ಮಹಿಳೆ
ಸಾಮಾಜಿಕ ಅಂತರವನ್ನು ಖಾತ್ರಿಪಡಿಸಿಕೊಂಡು ಕೊರಿಯೋಗ್ರಾಫ್ ಮಾಡಲಾದ ಈ ನೃತ್ಯಕ್ಕೆ ಗುರ್ಪ್ರೀತ್ ಸಿಂಗ್, ಚರಣ್‌ಜಿತ್ ಸಿಂಗ್ ಹಾಗೂ ಕನ್ವರ್ ಸಿಂಗ್ ಸ್ಟೆಪ್ ಹಾಕಿದ್ದಾರೆ. ಕಪ್ಪು, ಕೇಸರಿ, ನೀಲಿ ಹಾಗೂ ಹಳದಿ ಬಣ್ಣದ ಧಿರಿಸಿನಲ್ಲಿ ಈ ಸರ್ದಾರರು ಕಂಗೊಳಿಸುತ್ತಿದ್ದಾರೆ.
https://twitter.com/VaGentlenerd/status/1372391822266368000?ref_src=twsrc%5Etfw%7Ctwcamp%5Etweetembed%7Ctwterm%5E1372391822266368000%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbhangra-on-uilleann-dance-group-presents-perfect-blend-of-punjabi-and-irish-folk-on-st-patricks-day-3548051.html