alex Certify ಒಂದೇ ಫ್ರೇಮ್ ನಲ್ಲಿ ಸೆರೆಯಾದ ಸಪ್ತ ಸುಂದರಿಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಫ್ರೇಮ್ ನಲ್ಲಿ ಸೆರೆಯಾದ ಸಪ್ತ ಸುಂದರಿಯರು…!

ಮುಂಬೈ: ಅಂತರ್ಜಾಲ ಹೊಸ ಹೊಸ ವಿಷಯಗಳ ಆಗರವಾದರೆ, ಒಮ್ಮೊಮ್ಮೆ ಹಳೆಯ ನೆನಪುಗಳನ್ನೂ ನೆನಪಿಸಿ ಖುಷಿ ನೀಡುತ್ತದೆ. ಏಳು ಮಂದಿ ಮಿಸ್ ಇಂಡಿಯಾ ಸುಂದರಿಯರು ಒಟ್ಟಿಗೆ ಇರುವ ಫೋಟೋ ಒಂದು ಈಗ ವೈರಲ್ ಆಗಿದ್ದು, ನೋಡುಗರನ್ನು ಸೆಳೆಯುತ್ತಿದೆ.

1966 ರಲ್ಲಿ ರೀಟಾ ಫರಿಯಾ ಮಿಸ್ ವರ್ಲ್ಡ್ ಆದ ನಂತರ ಭಾರತ ಸೌಂದರ್ಯ ಕ್ಷೇತ್ರದಲ್ಲಿ ಯಾವುದೇ ಸಾಧನೆ ಮಾಡಿರಲಿಲ್ಲ. ನಂತರ 1994ರಲ್ಲಿ ಐಶ್ವರ್ಯ ರೈ ಮಿಸ್ ವರ್ಲ್ಡ್ ಗೆದ್ದ ನಂತರ ಶುರುವಾದ ಗೆಲುವಿನ ಸರಣಿ ಭಾರತಕ್ಕೆ ಸಾಕಷ್ಟು ಪ್ರಸಿದ್ದಿಯನ್ನು ತಂದುಕೊಟ್ಟಿತು. 1994 ರಲ್ಲಿ ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಪಟ್ಟ ಗೆದ್ದುಕೊಂಡರು. ಡಯಾನಾ ಹೇಡನ್ 1997 ರಲ್ಲಿ, ಯುಕ್ತ ಮುಖಿ 1999 ರಲ್ಲಿ ಮಿಸ್ ವರ್ಲ್ಡ್ ಗೆದ್ದರು.

2000 ನೆ ಇಸವಿಯಲ್ಲಿ ಪ್ರಿಯಾಂಕ ಚೋಪ್ರಾ ಮಿಸ್ ವರ್ಲ್ಡ್ ಗೆದ್ದರು. ಲಾರಾ ದತ್ತ ಅದೇ ವರ್ಷ ಮಿಸ್ ಯೂನಿವರ್ಸ್ ಗೆದ್ದರೆ, ದಿಯ ಮಿರ್ಜಾ ಮಿಸ್ ಏಷಿಯಾ ಫೆಸಿಫಿಕ್ ಗೆದ್ದರು.

ಅದಾದ ತುಂಬಾ ಸಮಯದ ನಂತರ ಮನುಷಿ ಚಿಲ್ಲರ್ ದೇಶಕ್ಕೆ 2017 ರಲ್ಲಿ ಈ ಹೆಮ್ಮೆಯನ್ನು ಮತ್ತೊಮ್ಮೆ ತಂದುಕೊಟ್ಟರು.

ಐಶ್ವರ್ಯ ರೈ, ಸುಶ್ಮಿತಾ ಸೇನ್, ಪ್ರಿಯಾಂಕ ಚೋಪ್ರಾ, ಲಾರಾ ದತ್ತಾ, ದಿಯಾ ಮಿರ್ಜಾ, ಡಯಾನ ಹೇಡನ್, ಯುಕ್ತಾ ಮುಖಿ ಈ ಏಳು ಜನ ಸುಂದರಿಯರು ಒಟ್ಟಿಗೆ ಇರುವ ಫೋಟೋವನ್ನು ರೆಟ್ರೋ ಬಾಲಿವುಡ್ ಎನ್ನುವ ಪೇಜ್ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಸುಂದರಿಯರ ಗುಂಪು” ಎಂಬ ಶೀರ್ಷಿಕೆಯನ್ನು ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...