alex Certify ಟ್ರೋಲ್‌ ಮಾಡಿದವನಿಗೆ ತಿರುಗೇಟು ನೀಡಿದ ಅಭಿಷೇಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೋಲ್‌ ಮಾಡಿದವನಿಗೆ ತಿರುಗೇಟು ನೀಡಿದ ಅಭಿಷೇಕ್

ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ ಅಂದ್ರೆ ಗೊತ್ತಿಲ್ಲ ಅನ್ನೋರು ಯಾರೂ ಇಲ್ಲ. ತಮ್ಮ ಸಿನಿಮಾ, ಕ್ರೀಡಾಸಕ್ತಿ ಜೊತೆ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿ ಇರುವ ಮೂಲಕವೂ ಮಿ.‌ ಜೂನಿಯರ್ ಬಚ್ಚನ್​ ಸುದ್ದಿಯಾಗುತ್ತಲೇ ಇರ್ತಾರೆ.

ತಮ್ಮ ಬಿರುಸು ನುಡಿಗಳಿಂದಲೇ ಟ್ರೋಲಿಗರ ಬಾಯಿ ಮುಚ್ಚಿಸುವ ತಾಕತ್ತು ಅಭಿಷೇಕ್​ ಬಚ್ಚನ್​ರಿಗಿದೆ. ಹಾಗೂ ಬಚ್ಚನ್​ರ ಈ ಗುಣ ಅನೇಕರಿಗೆ ಇಷ್ಟವೂ ಹೌದು. ಕೆಲದಿನಗಳ ಹಿಂದಷ್ಟೇ ಯಾರೋ ಟ್ರೋಲಿಗರು ಅಭಿಷೇಕ್​ ಮುಖಕ್ಕೆ ಹೋಲಿಕೆ ಇರುವ ರೈತನೊಬ್ಬನ ಫೋಟೋ ಶೇರ್​ ಮಾಡಿದ್ದರು. ಅಲ್ಲದೇ…..ಅಭಿಷೇಕ್​​ ಏನಾದ್ರೂ ಬಚ್ಚನ್​ ಆಗಿರದೇ ಇದ್ದಿದ್ದರೆ ಹೀಗೆ ಇರುತ್ತಿದ್ದರು ಅಂತಾ ಕ್ಯಾಪ್ಶನ್​ ಹಾಕುವ ಮೂಲಕ ವ್ಯಂಗ್ಯವಾಡಿದ್ದರು.

ಇದಕ್ಕೆ ಉತ್ತರಿಸಿದ ಅಭಿಷೇಕ್​ ಬಚ್ಚನ್​ ಆದರೂ ನಿನಗಿಂತ ಚೆನ್ನಾಗಿ ಕಾಣುತ್ತಿದ್ದೆ ಅಂತಾ ಕಾಮೆಂಟ್​ ಹಾಕುವ ಮೂಲಕ ಟ್ರೋಲಿಗನ ಬಾಯಿ ಮುಚ್ಚಿಸಿದ್ದಾರೆ.
ಆದರೆ ಇಲ್ಲಿಗೆ ಸಂಭಾಷಣೆ ಅಂತ್ಯವಾಗಿಲ್ಲ. ತನ್ನ ಮುಂದಿನ ಟ್ವೀಟರ್​ನಲ್ಲಿ ಬಳಕೆದಾರರೊಬ್ಬರು ಅಭಿಷೇಕ್​ರ ದೋಸ್ತಾನಾ ಚಿತ್ರದ ಕ್ಲಿಪ್​ವೊಂದನ್ನ ಶೇರ್​ ಮಾಡಿ ನೀವು ನನ್ನ ಇಷ್ಟಪಡ್ತೀರಿ ಎಂದು ನನಗೆ ತಿಳಿದಿದೆ ಅಂತಾ ಬರೆದುಕೊಂಡಿದ್ರು.

ನಾನು ನನ್ನ ತಂದೆಗಾಗಿ ಪಾ ಸಿನಿಮಾ ಮಾಡಿದ್ದೇನೆ. ನನ್ನ ಕೆಲವು ಚಿತ್ರಗಳು ಒಳ್ಳೆಯ ಕಲೆಕ್ಷನ್​ ಮಾಡಿಲ್ಲ. ಕೆಲವೊಂದು ಸಿನಿಮಾಗೆ ಬಜೆಟ್​ ಸಮಸ್ಯೆಯೂ ಉಂಟಾಗಿತ್ತು. ಆದರೆ ಜನರ ದೃಷ್ಟಿಯಲ್ಲಿ ಬಚ್ಚನ್​ ಮಗ ಬೆಳ್ಳಿಯ ಚಮಚ ಹಿಡಿದೇ ಇರುತ್ತಾನೆ ಎಂದು ಭಾವಿಸ್ತಾರೆ ಅಂತಾ ಜ್ಯೂ. ಬಚ್ಚನ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...