alex Certify ಬಿದ್ದುಬಿದ್ದು ನಗುವಂತೆ ಮಾಡುತ್ತೆ ʼಹೇರಾ ಫೇರಿʼಯ ಬಾಬುರಾವ್ ರೆಸ್ಯೂಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದ್ದುಬಿದ್ದು ನಗುವಂತೆ ಮಾಡುತ್ತೆ ʼಹೇರಾ ಫೇರಿʼಯ ಬಾಬುರಾವ್ ರೆಸ್ಯೂಮ್

ʼಹೇರಾ ಫೇರಿʼ ಚಿತ್ರದಲ್ಲಿ ಬಾಬುರಾವ್ ಪಾತ್ರ ಯಾರಿಗೆ ತಾನೇ ಗೊತ್ತಿಲ್ಲ…? ಪರೇಶ್ ರಾವಲ್ ಜೀವ ತುಂಬಿರುವ ಈ ಪಾತ್ರವು ಆ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಇದೀಗ ಬಾಬು ರಾವ್‌ ಪಾತ್ರಕ್ಕೆ CV ಒಂದನ್ನು ಆ ಚಿತ್ರದ ಅಭಿಮಾನಿಯೊಬ್ಬರು ರಚಿಸಿದ್ದಾರೆ.

ಬಾಬುರಾವ್‌ ಸಂದರ್ಶನಕ್ಕೆ ಹೋದಾಗ ಹೇಗಿರುತ್ತದೆ ಎಂಬ ಅಣುಕು ಸನ್ನಿವೇಶವನ್ನು ಊಹಿಸಿಕೊಳ್ಳಲು ಸೂಚಿಸಿ, ಇನ್‌ಸ್ಟಾಗ್ರಾಂನಲ್ಲಿ ಈ ರೆಸ್ಯೂಮೆಯ ಚಿತ್ರವನ್ನು ಹಾಕಲಾಗಿದೆ. ಬಾಬು ರಾವ್‌ ನ ಶೈಕ್ಷಣಿಕ ಅರ್ಹತೆ, ಅನುಭವ, ಸಾಧನೆಗಳು, ಜೀವನದ ಫಿಲಾಸಫಿ, ಶಕ್ತಿ, ಪುರಸ್ಕಾರಗಳು ಸೇರಿದಂತೆ ಅನೇಕ ವಿಷಯಗಳ ಕುರಿತಂತೆ ಈ ರೆಸ್ಯೂಮೆಯಲ್ಲಿ ತಿಳಿಸಲಾಗಿದೆ.

ಈ ಸಿವಿಯನ್ನು ಖುದ್ದಾಗಿ ಟ್ವಿಟರ್‌ನಲ್ಲಿ ಕಂಡ ಪರೇಶ್ ರಾವಲ್, ರೀಟ್ವೀಟ್ ಮಾಡಿದ್ದು, “ಬಾಬು ಭಯ್ಯಾರ ಆಧಾರ್‌ ಕಾರ್ಡ್‌ಗಾಗಿ ಅಬ್ಬಾಸ್‌ಗೆ ಧನ್ಯವಾದಗಳು” ಎಂದು ಸಂದೇಶವನ್ನು ಸಹ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...