alex Certify ‘ಸಿನಿಮಾ’ ಕುರಿತ ನಿಮ್ಮ ಹೇಳಿಕೆ ತಪ್ಪು: ನವರಸನಾಯಕ ಜಗ್ಗೇಶ್ ಗೆ ‘ಕೌರವ’ ಬಿ.ಸಿ. ಪಾಟೀಲ್ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಿನಿಮಾ’ ಕುರಿತ ನಿಮ್ಮ ಹೇಳಿಕೆ ತಪ್ಪು: ನವರಸನಾಯಕ ಜಗ್ಗೇಶ್ ಗೆ ‘ಕೌರವ’ ಬಿ.ಸಿ. ಪಾಟೀಲ್ ಟಾಂಗ್

‘ಯಾರ್ಯಾರೋ ಹೀರೋಗಳು ಬರ್ತಾರೆ, ಅವರ ಸಿನಿಮಾ ನೋಡ್ಬೇಡಿ’ ಎಂದು ನೀವು ಹೇಳಿರುವುದು ತಪ್ಪು. ಹಳೆಯ ಚಿಗುರು ಹೋಗದೇ ಹೊಸ ಚಿಗುರು ಬರಲು ಸಾಧ್ಯವಿಲ್ಲ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಜಗ್ಗೇಶ್ ಅವರೇ, ಗ್ರಾಮೀಣ ಪ್ರದೇಶದಿಂದ ಬಂದಂತಹ ನಮ್ಮ-ನಿಮ್ಮಂತವರು ಚಿತ್ರರಂಗಕ್ಕೆ ಹೊಸ ಪೀಳಿಗೆ ಬರಬೇಕು. ಹೊಸ ತಲೆಮಾರಿನ ಪ್ರತಿಭೆಗಳನ್ನು ಹೊಸಬರನ್ನು ಹಾಗೂ ಅವರ ಕಲೆಯನ್ನು ಪ್ರೋತ್ಸಾಹಿಸಬೇಕು. ಅವರನ್ನು ಬೆಳೆಸಬೇಕೇ ಹೊರತು ಹೊಸ ಪ್ರತಿಭೆಗಳನ್ನು ನಿರುತ್ಸಾಹಗೊಳಿಸಬಾರದು ಎಂದು ಹೇಳಿದ್ದಾರೆ.

ಯಾರ್ಯಾರೋ ಹೀರೋಗಳು ಬರ್ತಾರೆ ಅವರ ಸಿನಿಮಾ ನೋಡಬೇಡಿ ಎಂದು ಹೇಳಿರುವುದು ತಪ್ಪು. ಚಿತ್ರರಂಗಕ್ಕೆ ಬರುವ ಹೊಸಬರನ್ನು ನಾವು ಪ್ರೋತ್ಸಾಹಿಸಬೇಕು. ಅವರನ್ನು ತಿರಸ್ಕರಿಸುವುದಾಗಲಿ, ನಿರುತ್ಸಾಹಗೊಳಿಸುವುದಾಗಲಿ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಗ್ಗೇಶ್ ಅವರೇ ದಯವಿಟ್ಟು ಇಂತಹ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ನೀಡಬೇಡಿ. ನಾನೊಬ್ಬ ಪುಟ್ಟ ಕಲಾವಿದನಾಗಿ ನಿಮ್ಮೊಂದಿಗೆ ಬೆಳೆದವನಾದ್ದರಿಂದ ನಿಮಗೆ ಈ ವಿಷಯವನ್ನು ಗಮನಕ್ಕೆ ತರುತ್ತಿದ್ದೇನೆ. ನಮ್ಮ ನಿಮ್ಮ ಮಕ್ಕಳು ಸಹ ಚಿತ್ರರಂಗಕ್ಕೆ ಬರಬೇಕು. ಯುವಕರನ್ನು, ಹೊಸಬರನ್ನು ಪ್ರೋತ್ಸಾಹಿಸಬೇಕೆ ಹೊರತು ಈ ರೀತಿ ಹೊಸ ಪ್ರತಿಭೆಗಳನ್ನು ಹೊಸ ಕಲಾವಿದರನ್ನು ವಿರೋಧಿಸುವಂತಹ ಹೇಳಿಕೆ ನೀಡಬಾರದೆಂದು ನನ್ನ ವಿನಂತಿಯಾಗಿದೆ ಎಂದು ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...