alex Certify ʼಬಚ್ಚನ್​ ಪಾಂಡೆʼ ಸಿನಿಮಾದ ಅಕ್ಷಯ್​ ಕುಮಾರ್​ ಹೊಸ ಲುಕ್​ ರಿವೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಚ್ಚನ್​ ಪಾಂಡೆʼ ಸಿನಿಮಾದ ಅಕ್ಷಯ್​ ಕುಮಾರ್​ ಹೊಸ ಲುಕ್​ ರಿವೀಲ್

ಬಾಲಿವುಡ್​ನ ಮುಂಬರುವ ಚಿತ್ರ ʼಬಚ್ಚನ್ ಪಾಂಡೆʼಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಅಕ್ಷಯ್​ ಕುಮಾರ್​ ಸಿನಿಮಾದಲ್ಲಿ ತಮ್ಮ ಹೊಸ ಲುಕ್​ನ ಪೋಸ್ಟರ್​ನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಬಾಲಿವುಡ್​ ನಟಿ ಕೃತಿ ಸನೂನ್​, ಅರ್ಶದ್​ ವಾರ್ಸಿ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫರ್ಹಾದ್​ ಸಮ್ಜಿ ಆಕ್ಷನ್​ ಕಟ್​ ಹೇಳುತ್ತಿರುವ ಸಿನಿಮಾ ಇದಾಗಿದೆ. ಗುರುವಾರ ರಿಲೀಸ್​ ಮಾಡಲಾದ ಪೋಸ್ಟರ್​ನಲ್ಲಿ ಅಕ್ಷಯ್​ ಕುಮಾರ್​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ನೀಲಿ ಬಣ್ಣದ ಜೀನ್ಸ್ ಪ್ಯಾಂಟ್​, ಕಪ್ಪು ಬಣ್ಣದ ಶರ್ಟ್, ಹಣೆಗೆ ಸ್ಕಾರ್ಫ್​ ಗಾಯವಾದ ಕಣ್ಣು ಹಾಗೂ ಕುತ್ತಿಗೆಯಲ್ಲಿ ಸಿಕ್ಕಾಪಟ್ಟೆ ಬಂಗಾರದ ಬಣ್ಣದ ಸರಗಳನ್ನ ಹಾಕಿರುವ ಅಕ್ಷಯ್​ ಕಾರೊಂದರ ಮೇಲೆ ಕೂತು ಸಿಟ್ಟಿನಿಂದ ನೋಡುತ್ತಿರುವಂತೆ ಇದೆ. ಫೋಟೋದಲ್ಲಿ ಫಿಲಂ ಕ್ಲ್ಯಾಪ್​ ಬೋರ್ಡ್ ಇರೋದನ್ನೂ ಕಾಣಬಹುದಾಗಿದೆ.

ಈ ಫೋಟೋವನ್ನ ಶೇರ್​ ಮಾಡಿರುವ ಅಕ್ಷಯ್​ ಕುಮಾರ್, ಹೊಸ ವರ್ಷ, ಹಳೆಯ ತಂಡ, ಬಚ್ಚನ್​ ಪಾಂಡೆ ಸಿನಿಮಾದ ಶೂಟಿಂಗ್ ಆರಂಭ, ಸಾಜಿದ್​ ನಾಡಿಯಾವಾಲಾ ಜೊತೆಗಿನ ನನ್ನ 10ನೇ ಸಿನಿಮಾ, ನಿಮ್ಮೆಲ್ಲರ ಶುಭ ಹಾರೈಕೆಯ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.

https://www.instagram.com/p/CJu2RYjnOKj/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...