alex Certify ನಕ್ಕು ನಗಿಸುತ್ತೆ ಬಾಬಾ ಸೆಹ್ಗಾಲ್ ರ್ಯಾಪ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕ್ಕು ನಗಿಸುತ್ತೆ ಬಾಬಾ ಸೆಹ್ಗಾಲ್ ರ್ಯಾಪ್ ವಿಡಿಯೋ

Baba Sehgal's Version of Backstreet Boys' 'I Want It That Way' is Internet's  Dental Anthemಖ್ಯಾತ ಪಾಪ್ ಮತ್ತು ರ್ಯಾಪ್ ಹಾಡುಗಾರ ಬಾಬಾ ಸೆಹ್ಗಾಲ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.

ಬ್ಯಾಕ್ ಸ್ಟ್ರೀಟ್ ಬಾಯ್ಸ್ ತಂಡದ ಐ ವಾಂಟ್ ಇಟ್ ದಟ್ ವೇ ಹಾಡಿನ ರಾಗದಲ್ಲೇ ಹಿಂದಿ ಆವೃತ್ತಿ ಹೊರತಂದಿದ್ದು, ಶೈನಿಂಗ್ ತೇರೆ ದಾಂತ್ ಹೈ ಎಂಬ ಸಾಹಿತ್ಯದೊಂದಿಗೆ ಹಾಸ್ಯಾತ್ಮಕವಾಗಿ ಹಾಡಿದ್ದಾರೆ.

ಏಕಕಾಲದಲ್ಲಿ ನಾಲ್ಕು ಅವತಾರದಲ್ಲಿ ಕಾಣಿಸಿಕೊಂಡಿರುವ ಬಾಬಾ ಸೆಹ್ಗಾಲ್, ವಿಭಿನ್ನ ಶೈಲಿಯ ಭಾವಾಭಿನಯದ ಮೂಲಕ ನಗೆ ತರಿಸುತ್ತಾರೆ.

ಅಷ್ಟೇ ಅಲ್ಲದೆ, ವಿಡಿಯೋದ ಆರಂಭದಲ್ಲಿ ಕ್ಲಿಪ್ ಬೋರ್ಡ್ ನಲ್ಲಿ ಕಾಣಿಸಿಕೊಂಡು, ನಂತರ ಲ್ಯಾಪ್ ಟಾಪ್ ನಲ್ಲಿ ಕಾಣಿಸಿಕೊಂಡು ಸೆಳೆಯುತ್ತಾರೆ. ಬಳಿಕ ಖಾಲಿ ಸಭಾಂಗಣ, ಹಾಗೆ ತುಂಬಿದ ಸಭಾಂಗಣದಲ್ಲಿ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆಗಳ ನಡುವೆ ಹಾಡುತ್ತಿರುವಂತೆ ಸೃಷ್ಟಿಸಲಾಗಿದೆ. ಪ್ರಮುಖವಾಗಿ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವ ಸಂದೇಶವನ್ನು ನವಿರು ಹಾಸ್ಯದ ಮೂಲಕ ಹಾಡು ಕಟ್ಟಿ ಹಾಡಿದ್ದಾರೆ.

— Baba Sehgal (@OnlyBabaSehgal) September 9, 2020

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...