
ಇಂಗ್ಲೀಷ್ ಹಾಡಿಗೆ ದೇಸಿ ಟ್ವಿಸ್ಟ್ ನೀಡಿರುವ ಬಾಬಾ ಸೈಗಲ್ ಸೆನ್ಯೂರಿಟಾ ಹೆಸರಿಗೆ ಬದಲಾಗಿ ಸರೀತಾ ಎನ್ನುತ್ತಾ ಈ ಹಾಡನ್ನ ಹಾಡಿದ್ದಾರೆ. ಈ ದೇಸಿ ಟ್ವಿಸ್ಟ್ ಹಾರಿನಲ್ಲಿ ಒಂದಲ್ಲ ಬದಲಾಗಿ ಮೂವರು ಸೈಗಲ್ಗಳು ಹಾಡುತ್ತಿದ್ದಾರೆ..!
ಯೆಸ್..! ವಿಡಿಯೋದಲ್ಲಿ ಇಬ್ಬರು ಹಾಡಿನ ಬಗ್ಗೆ ಚರ್ಚೆ ಮಾಡುತ್ತಿದ್ದರೆ ಇನ್ನೊಬ್ಬ ಬಾಬಾ ಸೈಗಲ್ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸರೀತಾ ಈ ಹಾಡನ್ನ ನಿನಗಾಗಿ ಬರೆದಿದ್ದೇನೆ ಎನ್ನುವ ಮೂಲಕ ಈ ಹಾಡನ್ನ ಬಾಬಾ ಸೈಗಲ್ ಹಾಡಲು ಆರಂಭಿಸ್ತಾರೆ. ಫನ್ನಿ ಸಾಹಿತ್ಯ ಹೊಂದಿರುವ ಈ ಹಾಡು ನೆಟ್ಟಿಗರ ಮನ ಗೆದ್ದಿದೆ.