alex Certify ಡಾಕ್ಟರ್​ ಆಗಲು ಹೊರಟ ನಟ ಆಯುಷ್ಮಾನ್​ ಖುರಾನಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾಕ್ಟರ್​ ಆಗಲು ಹೊರಟ ನಟ ಆಯುಷ್ಮಾನ್​ ಖುರಾನಾ..!

ಬಾಲಿವುಡ್ ​ನಟ ಆಯುಷ್ಮಾನ್​ ಖುರಾನಾ ಪ್ರತಿ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡೋದ್ರ ಜೊತೆ ಜೊತೆಗೆ ಸಮಾಜಕ್ಕೊಂದು ಉತ್ತಮ ಸಂದೇಶವನ್ನ ಹೊತ್ತು ತರುತ್ತೆ. ಪ್ರಸ್ತುತ ಚಂಡೀಗಢದಲ್ಲಿರುವ ನಟ ಆಯುಷ್ಮಾನ್​ ಖುರಾನಾ ತಮ್ಮ ಮುಂಬರುವ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

ಬಿಗ್​ ಸ್ಕ್ರೀನ್​​ನಲ್ಲಿ ಆಯುಷ್ಮಾನ್​ ಖುರಾನಾ ಸಿನಿಮಾ ಯಾವಾಗ ಬರುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿರುವ ಬೆನ್ನಲ್ಲೇ ಆಯುಷ್ಮಾನ್​ ಖುರಾನಾ ತಮ್ಮ ಮತ್ತೊಂದು ಸಿನಿಮಾವನ್ನ ಘೋಷಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟ ಮೊದಲ ಬಾರಿಗೆ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮತ್ತೊಂದು ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದಾರೆ. ಡಾಕ್ಟರ್​​ ಜಿ ಎಂಬ ಹೆಸರಿನ ಈ ಸಿನಿಮಾವನ್ನ ಅನುಭೂತಿ ಕಶ್ಯಪ್​ ನಿರ್ದೇಶಿಸಲಿದ್ದಾರೆ ಹಾಗೂ ಜಂಗ್ಲಿ ಪಿಕ್ಚರ್ಸ್​ ಈ ಸಿನಿಮಾವನ್ನ ನಿರ್ಮಿಸಲಿದೆ.

ಡಾಕ್ಟರ್​ ಜಿ ನಾನು ಅತ್ಯಂತ ಪ್ರೀತಿ ಮಾಡುತ್ತಿದ್ದ ಚಿತ್ರಕತೆಗಳಲ್ಲೊಂದಾಗಿದೆ. ಇದೊಂದು ನವೀನ ಕಲ್ಪನೆಯಾಗಿದ್ದು ನಿಮ್ಮನ್ನ ನಗಿಸಲಿದೆ. ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಡಾಕ್ಟರ್​ ಕೋಟ್​​ ಧರಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

https://www.instagram.com/p/CJFjWn9p434/?utm_source=ig_web_copy_link

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...