ದೇಶಾದ್ಯಂತ ಕೋವಿಡ್ ಭೀತಿಯ ವಾತಾವರಣ ನೆಲೆಸಿರುವ ನಡುವೆ ದಿಟ್ಟ ಮನಸ್ಸಿನ ಮಂದಿ ತಮ್ಮ ಸುತ್ತಲಿನ ಸಮಾಜದಲ್ಲಿ ಸಾಧ್ಯವಾದಷ್ಟು ಸಕಾರಾತ್ಮಕತೆ ತುಂಬಿಸಲು ಯತ್ನಿಸುತ್ತಿದ್ದಾರೆ.
ಇಂಥದ್ದೇ ಒಂದು ನಿದರ್ಶನದಲ್ಲಿ ಅಸ್ಸಾಂನ ಗಾಯಕರೊಬ್ಬರು ಫೋನ್ ಮೂಲಕ ಹಾಡು ಹಾಡುವ ಮೂಲಕ ಜನರ ಹೃದಯ ಗೆಲ್ಲುತ್ತಿದ್ದಾರೆ.
ರೋಗಿಗಳ ಮನೋಬಲ ಹೆಚ್ಚಿಸಲು ಹಾಡು ಹಾಡಿದ ಆಸ್ಪತ್ರೆ ಸಿಬ್ಬಂದಿ
ಸಿಲ್ಚರ್ ಮೂಲದ ಗಾಯಕ ಬಿಕ್ರಮ್ಜೀತ್ ಬೌಲಿಯಾ ಅವರು ಬೆಂಗಾಲಿ ಗಾಯಕ ಲೋಪಮುದ್ರ ಮಿತ್ರಾರಿಂದ ಸ್ಪೂರ್ತಿ ಪಡೆದು ತಮ್ಮ ಈ ಅಭಿಯಾನ ಆರಂಭಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿರುವ ಬೌಲಿಯಾ, ಆರು ದಿನಗಳಿಂದ ತಮ್ಮ ಈ ಕಾಯಕದ ಮೂಲಕ ಜನರ ಮೂಡ್ ಅನ್ನು ಮೇಲೆತ್ತುವ ಯತ್ನದಲ್ಲಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಿ ಪೆಡಿಕ್ಯೂರ್
“ಕೋವಿಡ್ ಪೀಡಿತರಾಗಿ ಚೇತರಿಸಿಕೊಳ್ಳುತ್ತಿರುವ ಸುಮಾರು 250 ಮಂದಿಗೆ ನಾನು ವಿವಿಧ ಹಾಡುಗಳನ್ನು ಹಾಡಿದ್ದೇನೆ. ಅಸ್ಸಾಂ , ಛತ್ತೀಸ್ಘಡ, ದೆಹಲಿ, ಪುಣೆ ಹಾಗೂ ದೇಶದ ವಿವಿಧ ಭಾಗದ ಯುವಕರಿಗಾಗಿ ಬೆಂಗಾಲಿ ಜಾನಪದ ಹಾಡುಗಳಿಂದ ಸ್ವಲ್ಪ ವಿಮುಖನಾಗಿ ಹಿಂದಿ ಹಾಡುಗಳನ್ನು ಸಹ ಹಾಡಿದ್ದೇನೆ” ಎಂದು ಮಾಧ್ಯಮಕ್ಕೆ ಕೊಟ್ಟ ಸಂದರ್ಶನದಲ್ಲಿ ಬೌಲಿಯಾ ತಿಳಿಸಿದ್ದಾರೆ.