ಸ್ಯಾಂಡಲ್ ವುಡ್ ನ ಬೇಡಿಕೆ ನಟಿಯರಲ್ಲಿ ಒಬ್ಬರಾದ ನಟಿ ಆಶಿಕಾ ರಂಗನಾಥ್ ಸೀರೆ ತೊಟ್ಟು ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದುಬಂದಿವೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್ ‘ಕೋಟಿಗೊಬ್ಬ 3’ ಚಿತ್ರದ ‘ಪಟಾಕಿ ಪೋರಿಯೋ’ ಎಂಬ ಹಾಡಿಗೆ ಕಿಚ್ಚ ಸುದೀಪ್ ಜೊತೆ ಸ್ಟೆಪ್ ಹಾಕಿದ್ದರು. ಕಳೆದ ತಿಂಗಳು ಇದರ ಲಿರಿಕಲ್ ವಿಡಿಯೋ ರಿಲೀಸ್ ಆಗಿ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿತ್ತು.