alex Certify ಮುಂದಿನ ಸಿನಿಮಾ ರಿವೀಲ್​ ಮಾಡಿದ ಅರ್ಜುನ್​ ಕಪೂರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ಸಿನಿಮಾ ರಿವೀಲ್​ ಮಾಡಿದ ಅರ್ಜುನ್​ ಕಪೂರ್​..!

ಧರ್ಮಶಾಲಾ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದ ಬಾಲಿವುಡ್​ ನಟ ಅರ್ಜುನ್​ ಕಪೂರ್​ ತಮ್ಮ ಮುಂದಿನ ಸಿನಿಮಾದ ಹೆಸರನ್ನ ಘೋಷಣೆ ಮಾಡಿದ್ದಾರೆ. ಈ ದೀಪಾವಳಿಯಿಂದ ಭೂತ್​ ಪೊಲೀಸ್​ ಎಂಬ ಹಾರರ್​ ಕಾಮಿಡಿ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ.

35 ವರ್ಷದ ಈ ನಟ ಈ ಬಾರಿಯ ದೀಪಾವಳಿಯನ್ನ ಭೂತ್​ ಪೊಲೀಸ್​ ಸಿನಿಮಾ ತಂಡದೊಂದಿಗೆ ಆಚರಿಸಲಿದ್ದಾರೆ. ಈ ಸಿನಿಮಾದಲ್ಲಿ ಜಾಕ್ಲಿನ್​ ಫರ್ನಾಂಡಿಸ್​, ಸೈಫ್​ ಅಲಿ ಖಾನ್​ ಹಾಗೂ ಯಾಮಿ ಗೌತಮ್​ ಸೇರಿದಂತೆ ಅನೇಕರು ಪಾತ್ರ ವಹಿಸಲಿದ್ದಾರೆ.

ನಾನು ಈ ದೀಪಾವಳಿಗೆ ನನ್ನ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡುತ್ತಿಲ್ಲ. ನಾನು ಈ ಬಾರಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿರಲಿದ್ದೇನೆ ಅಂತಾ ಹೇಳಿಕೊಂಡಿದ್ದಾರೆ. ಹಾಗೂ ಜನರಿಗೆ ಕೊರೊನಾ ಮುಂಜಾಗ್ರತೆಯೊಂದಿಗೆ ಹಬ್ಬ ಆಚರಿಸಲು ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...