ಧರ್ಮಶಾಲಾ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದ ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಮುಂದಿನ ಸಿನಿಮಾದ ಹೆಸರನ್ನ ಘೋಷಣೆ ಮಾಡಿದ್ದಾರೆ. ಈ ದೀಪಾವಳಿಯಿಂದ ಭೂತ್ ಪೊಲೀಸ್ ಎಂಬ ಹಾರರ್ ಕಾಮಿಡಿ ಸಿನಿಮಾದ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ.
35 ವರ್ಷದ ಈ ನಟ ಈ ಬಾರಿಯ ದೀಪಾವಳಿಯನ್ನ ಭೂತ್ ಪೊಲೀಸ್ ಸಿನಿಮಾ ತಂಡದೊಂದಿಗೆ ಆಚರಿಸಲಿದ್ದಾರೆ. ಈ ಸಿನಿಮಾದಲ್ಲಿ ಜಾಕ್ಲಿನ್ ಫರ್ನಾಂಡಿಸ್, ಸೈಫ್ ಅಲಿ ಖಾನ್ ಹಾಗೂ ಯಾಮಿ ಗೌತಮ್ ಸೇರಿದಂತೆ ಅನೇಕರು ಪಾತ್ರ ವಹಿಸಲಿದ್ದಾರೆ.
ನಾನು ಈ ದೀಪಾವಳಿಗೆ ನನ್ನ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡುತ್ತಿಲ್ಲ. ನಾನು ಈ ಬಾರಿ ಶೂಟಿಂಗ್ನಲ್ಲಿ ಬ್ಯುಸಿಯಾಗಿರಲಿದ್ದೇನೆ ಅಂತಾ ಹೇಳಿಕೊಂಡಿದ್ದಾರೆ. ಹಾಗೂ ಜನರಿಗೆ ಕೊರೊನಾ ಮುಂಜಾಗ್ರತೆಯೊಂದಿಗೆ ಹಬ್ಬ ಆಚರಿಸಲು ಸಲಹೆ ನೀಡಿದ್ದಾರೆ.