ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಎರಡು ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ಈ ಫೋಟೋಗಳ ನಡುವಿನ ವ್ಯತ್ಯಾಸ ಗುರುತಿಸಿ ಎಂದು ಅಭಿಮಾನಿಗಳ ಬಳಿ ಕೇಳಿದ್ದಾರೆ. ಇದಕ್ಕೆ ಅರ್ಜುನ್ ಸಹೋದರಿ ಹಾಗೂ ನಟಿ ಜಾನ್ವಿ ಕಪೂರ್ ಫನ್ನಿ ಕಮೆಂಟ್ ಮಾಡಿದ್ದಾರೆ.
ಮೊದಲನೇ ಫೋಟೋ ನಾನು ಕಥಕ್ ಮಾಡಿ ಮುಗಿಸಿದೆ ಎಂದು ನೀನು ತಿಳಿದಾಗ ಹಾಗೂ ಎರಡನೇ ಫೋಟೋ ನಾನು ಮತ್ತೆ ಕಥಕ್ ಮಾಡಲು ಆರಂಭಿಸಿದ್ರೆ ನೀನು ನೀಡುವ ಪ್ರತಿಕ್ರಿಯೆ ಆಗಿದೆ ಎಂದು ಜಾನ್ವಿ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಅರ್ಜುನ್ ಕಪೂರ್ ವಾಹ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅರ್ಜುನ್ ಕಪೂರ್ ನೀಡಿದ ಈ ಟಾಸ್ಕ್ನ್ನು ಪೂರ್ಣ ಮಾಡೋದ್ರಲ್ಲಿ ಅಭಿಮಾನಿಗಳು ಕೂಡ ಹಿಂದೆ ಬಿದ್ದಿಲ್ಲ. ಎರಡೂ ಫೋಟೋದಲ್ಲಿ ನಿಮ್ಮ ನಗುವಿನಲ್ಲಿ ಬದಲಾವಣೆ ಇದೆ ಎಂದು ಕೆಲವರು ಹೇಳಿದ್ರೆ. ಇನ್ನೂ ಹಲವರು ಮುಖ ಭಾವದಲ್ಲಿ ಬದಲಾವಣೆ ಎಂದು ಕಮೆಂಟ್ ಹಾಕಿದ್ದಾರೆ.
https://www.instagram.com/p/CNSUPMnpz4S/?utm_source=ig_web_copy_link