![](https://kannadadunia.com/wp-content/uploads/2020/10/5fb5f5f4-dee5-4835-badf-3c163076ebac.jpg)
2020ರ ಸಾಲಿನ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಅಂಕ ಪಡೆಯೋದ್ರ ಜೊತೆಗೆ ಔಟ್ ಆಫ್ ಔಟ್ ಅಂಕವನ್ನ ಪಡೆದಿರೋ ಶೋಯೆಬ್ ಅಫ್ತಬ್ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಶೋಯೆಬ್ ಅಫ್ತಬ್ ಸಾಧನೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ, ಅದೇ ರೀತಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ವಿದ್ಯಾರ್ಥಿಯ ಸಾಧನೆಗೆ ಶಹಬ್ಬಾಸ್ ಎಂದಿದ್ದಾರೆ.
ಪತ್ರಿಕೆಯಲ್ಲಿ ಪ್ರಕಟವಾದ ಶೋಯೆಬ್ ಸಾಧನೆ ಕುರಿತಾದ ಬರಹಕ್ಕೆ ರಿಯಾಕ್ಟ್ ಮಾಡಿರುವ ಎ.ಆರ್. ರೆಹಮಾನ್ ಶಿಕ್ಷಣ, ಸ್ಪೂರ್ತಿ, ಜ್ಞಾನೋದಯ ಹಾಗೂ ಉನ್ನತಿ ಎಂಬ ಹ್ಯಾಶ್ ಟ್ಯಾಗ್ಗಳನ್ನ ಟ್ಯಾಗ್ ಮಾಡಿದ್ದಾರೆ.