ಗಣಿತದ ಸಮಸ್ಯೆಗೂ ಬಾಲಿವುಡ್ ಚಿತ್ರದ ಹಾಡಿಗೂ ಎತ್ತಿಂದೆತ್ತಣ ಅಲ್ವಾ…?
ಇದೇ ಗಣಿತದ ಕಾರಣದಿಂದಾಗಿ ನಟ ಅನಿಲ್ ಕಪೂರ್ ನೆಟ್ಟಿಗರ ಬಳಗದಲ್ಲಿ ವೈರಲ್ ಆಗಿದ್ದಾರೆ. ರಾಮ್ ಲಖನ್ರ ’ಒನ್ ಟೂ ಕಾ ಫೋರ್, ಫೋರ್ ಟೂ ಕಾ ಒನ್, ಮೈ ನೇಮ್ ಇಸ್ ಲಖನ್’ ಹಾಡಿನಲ್ಲಿ ನಟಿಸಿರುವ ಪಾತ್ರದಲ್ಲಿ ಗಣಿತದ ಸಮಸ್ಯೆ ಬಿಡಿಸುವ ತಮ್ಮ ಕ್ಷಮತೆಯಿಂದ ಅನಿಲ್ ಕಪೂರ್ ಸಂಚಲನ ಸೃಷ್ಟಿಸಿದ್ದಾರೆ.
’ಕೊಲಾಜ಼್ ಕಂಜಂಕ್ಚರ್’ ಎಂಬ ಕ್ಲಿಷ್ಟಕರ ಸಮಸ್ಯೆಯೊಂದನ್ನು ವಿವರಿಸುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ಚಿತ್ರ ನಿರ್ಮಾಪಕ ಅನುಭವ್ ಸಿನ್ಹಾ, ಕಪೂರ್ರನ್ನು ಈ ಪೋಸ್ಟ್ಗೆ ಟ್ಯಾಗ್ ಮಾಡಿದ್ದಾರೆ.
ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ಕಾರ್…!
“ಈ ಕೋಡ್ ಅನ್ನು ಬಹಳ ವರ್ಷಗಳ ಬಳಿಕ ಬಿಡಿಸಲಾಗಿದೆ. ಅನಿಲ್ ಕಪೂರ್, ದಯವಿಟ್ಟು ಇದನ್ನು ನೋಡಿ. ಸುಭಾಶಾ ಘಾಯ್” ಎಂದು ಸಿನ್ಹಾ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕೊಲಾಟ್ಜ್ ಸಮೀಕರಣವು ಬಹಳ ಅಪಾಯಕಾರಿ ಸಮಸ್ಯೆಯಾಗಿದ್ದು, ಜನರು ಇದಕ್ಕೆ ವಿಪರೀತವಾಗಿ ಅಂಟಿಕೊಂಡುಬಿಡುತ್ತಾರೆ ಹಾಗೂ ನಿಜಕ್ಕೂ ಇದು ಅಸಾಧ್ಯ ಎನ್ನುತ್ತಾರೆ ಮಿಷಿಗನ್ ವಿವಿಯ ಗಣಿತಜ್ಞ ಜೆಫ್ರಿ ಲಗಾರಿಯಸ್.