
ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿದ್ದ ವೇಳೆಯ ಹಳೆಯ ಫೋಟೋವೊಂದನ್ನ ಶೇರ್ ಮಾಡುವ ಮೂಲಕ ಟೈಗರ್ ಶ್ರಾಫ್ಗೆ ಫನ್ನಿಯಾಗಿ ಶುಭಾಶಯ ತಿಳಿಸಿದ್ದಾರೆ.
ಜನ್ಮದಿನದ ಶುಭಾಶಯಗಳು….! ನಿನಗೆ ಭಯ ಉಂಟು ಮಾಡಬಲ್ಲ ನನ್ನ ನೃತ್ಯ ಶೈಲಿಯನ್ನ ತೋರಿಸದೇ ಇರಲು ಪ್ರಯತ್ನಿಸುತ್ತೇನೆ ಎಂದು ಅನನ್ಯಾ ಬರೆದುಕೊಂಡಿದ್ದಾರೆ.
ಅನನ್ಯಾ ಪಾಂಡೆ ನಟ ಟೈಗರ್ ಶ್ರಾಫ್ ಜೊತೆ ʼಸ್ಟೂಡೆಂಟ್ ಆಫ್ ದ ಇಯರ್ – 2ʼನಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಅನನ್ಯಾ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದಾದ ಬಳಿಕ ಅನನ್ಯಾ ಪಾಂಡೆ ʼಪತಿ ಪತ್ನಿ ಔರ್ ವೋʼ ಎಂಬ ಸಿನಿಮಾದಲ್ಲಿ ಭೂಮಿ ಪೆಡ್ನೆಕರ್ ಹಾಗೂ ಕಾರ್ತಿಕ್ ಆರ್ಯನ್ ಜೊತೆ ತೆರೆ ಹಂಚಿಕೊಂಡಿದ್ದರು. ತೀರಾ ಇತ್ತೀಚಿಗೆ ಅನನ್ಯಾ ಪಾಂಡೆ ಅಭಿನಯದ ʼಖಾಲಿ ಪೀಲಿʼ ಎಂಬ ಸಿನಿಮಾ ಒಟಿಟಿ ವೇದಿಕೆಯಲ್ಲಿ ತೆರೆ ಕಂಡಿತ್ತು.
ಸದ್ಯ ಅನನ್ಯಾ ಪಾಂಡೆ ಶಕುನ್ ಭಟ್ರಾರ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾಂತ್ ಚರ್ತುವೇದಿ ಮುಖ್ಯಭೂಮಿಕೆಯಲ್ಲಿರುವ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಯಲ್ಲಿ ವಿಜಯ್ ದೇವರಕೊಂಡ ಜೊತೆ ʼಲೈಗರ್ʼ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.