alex Certify 50 ವರ್ಷಗಳ ಹಿಂದಿನ ಬಾಲಿವುಡ್​ ಸಿನಿಮಾ ತುಣುಕನ್ನು ಹಂಚಿಕೊಂಡ ‘ಆನಂದ್’​ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ವರ್ಷಗಳ ಹಿಂದಿನ ಬಾಲಿವುಡ್​ ಸಿನಿಮಾ ತುಣುಕನ್ನು ಹಂಚಿಕೊಂಡ ‘ಆನಂದ್’​ ಮಹೀಂದ್ರಾ

ರಾಜೇಶ್​ ಖನ್ನಾ ಹಾಗೂ ಅಮಿತಾಬ್​ ಬಚ್ಚನ್​ರ ಸೂಪರ್​ಹಿಟ್​ ಸಿನಿಮಾ ‘ಆನಂದ್’​​ 1971ರ ಮಾರ್ಚ್ 12ರಂದು ತೆರೆ ಕಂಡಿತ್ತು. ಹೃಶಿಕೇಶ್​ ಮುಖರ್ಜಿಯ ಈ ಸಿನಿಮಾ ತೆರೆಕಂಡು ಬರೋಬ್ಬರಿ 50 ವರ್ಷಗಳೇ ಕಳೆದಿದೆ.

ಇದೇ ಸಂದರ್ಭದಲ್ಲಿ ಮಹೀಂದ್ರಾ & ಮಹೀಂದ್ರಾ ಕಂಪನಿ ಚೇರ್​ಮನ್​​ ಆನಂದ್​ ಮಹೀಂದ್ರಾ ಈ ಸಿನಿಮಾದ ಕ್ಲಿಪ್​ನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ಈ ಸಿನಿಮಾದ ಸಣ್ಣ ದೃಶ್ಯವನ್ನ ಶೇರ್​ ಮಾಡಿರುವ ಮಹೀಂದ್ರಾ ಗ್ರೂಪ್​ ಚೇರ್​​ಮನ್​ ಆನಂದ್ ಮಹೀಂದ್ರಾ, ಈ ಸಿನಿಮಾ ತೆರೆಕಂಡ ವೇಳೆಯಲ್ಲಿ ನನಗಿನ್ನೂ 15 ವರ್ಷ. ನಾನು ಈ ಫಿಲಂನ್ನು ತುಂಬಾನೇ ಆನಂದಿಸಿದ್ದೆ. ಅಲ್ಲದೇ ‘ಆನಂದ್​’ ಹೆಸರಿನ ಸಿನಿಮಾ ಸೂಪರ್​ ಹಿಟ್​ ಆಗಿದ್ದಕ್ಕೆ ನನಗೆ ತುಂಬಾನೇ ಖುಷಿಯಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಆನಂದ್​ ಮಹೀಂದ್ರಾರ ಈ ಟ್ವೀಟ್​ ಬಳಿಕ ನೆಟ್ಟಿಗರು ‘ಆನಂದ್’​ ಸಿನಿಮಾ ಬಗ್ಗೆ ತಮ್ಮ ಅನುಭವಗಳನ್ನ ಶೇರ್​ ಮಾಡಿದ್ದಾರೆ.

— anand mahindra (@anandmahindra) March 12, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...