
ಇದೇ ಸಂದರ್ಭದಲ್ಲಿ ಮಹೀಂದ್ರಾ & ಮಹೀಂದ್ರಾ ಕಂಪನಿ ಚೇರ್ಮನ್ ಆನಂದ್ ಮಹೀಂದ್ರಾ ಈ ಸಿನಿಮಾದ ಕ್ಲಿಪ್ನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಈ ಸಿನಿಮಾದ ಸಣ್ಣ ದೃಶ್ಯವನ್ನ ಶೇರ್ ಮಾಡಿರುವ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ, ಈ ಸಿನಿಮಾ ತೆರೆಕಂಡ ವೇಳೆಯಲ್ಲಿ ನನಗಿನ್ನೂ 15 ವರ್ಷ. ನಾನು ಈ ಫಿಲಂನ್ನು ತುಂಬಾನೇ ಆನಂದಿಸಿದ್ದೆ. ಅಲ್ಲದೇ ‘ಆನಂದ್’ ಹೆಸರಿನ ಸಿನಿಮಾ ಸೂಪರ್ ಹಿಟ್ ಆಗಿದ್ದಕ್ಕೆ ನನಗೆ ತುಂಬಾನೇ ಖುಷಿಯಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಆನಂದ್ ಮಹೀಂದ್ರಾರ ಈ ಟ್ವೀಟ್ ಬಳಿಕ ನೆಟ್ಟಿಗರು ‘ಆನಂದ್’ ಸಿನಿಮಾ ಬಗ್ಗೆ ತಮ್ಮ ಅನುಭವಗಳನ್ನ ಶೇರ್ ಮಾಡಿದ್ದಾರೆ.