alex Certify ಶಾಕಿಂಗ್‌ ಸಂಗತಿ ಬಹಿರಂಗಪಡಿಸಿದ ನಟಿ ಅಮಿಷಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್‌ ಸಂಗತಿ ಬಹಿರಂಗಪಡಿಸಿದ ನಟಿ ಅಮಿಷಾ

ಬಾಲಿವುಡ್​ ನಟಿ ಅಮಿಷಾ ಪಟೇಲ್​ರದ್ದು ಎನ್ನಲಾದ ಆಡಿಯೋ ಮೆಸೇಜ್​ ಒಂದು ವೈರಲ್​ ಆಗ್ತಿದ್ದು, ಇದರಲ್ಲಿ ಅಮಿಷಾ ಪಟೇಲ್​ ತಮಗೆ ಬಿಹಾರದಲ್ಲಿ ಬೆದರಿಕೆ ಇದೆ ಅಂತಾ ಹೇಳಿಕೊಂಡಿದ್ದಾರೆ.

ಆಡಿಯೋದಲ್ಲಿ ಅಮಿಷಾ ತನಗೆ ಎಲ್​ಜೆಪಿ ನಾಯಕ ಡಾ. ಪ್ರಕಾಶ್​ ಚಂದ್ರ ಅವರಿಂದ ಬೆದರಿಕೆ ಇದೆ ಅಂತಾ ಹೇಳಿದ್ದಾರೆ. ಆತ ಒಬ್ಬ ಅಪಾಯಕಾರಿ ವ್ಯಕ್ತಿ. ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು ಮಾತ್ರವಲ್ಲದೇ ನಾನು ಮುಂಬೈಗೆ ಹಿಂದಿರುಗಿದ ಬಳಿಕವೂ ನನಗೆ ಬೆದರಿಕೆವೊಡ್ಡುತ್ತಿದ್ದಾರೆ ಅಂತಾ ಹೇಳಿದ್ದಾರೆ.

ಪಾಟ್ನಾದಲ್ಲಿ ನಡೆಯಲಿರುವ 3 ಗಂಟೆಗಳ ಚುನಾವಣಾ ರ್ಯಾಲಿಯಲ್ಲಿ ನೀನು ನನ್ನ ಜೊತೆ ಇರಬೇಕು ಅಂತಾ ನನಗೆ ಆವಾಜ್​ ಹಾಕಿದ್ದರು. ನಾನು ಅದೇ ದಿನ ಸಂಜೆ ವಿಮಾನದ ಮೂಲಕ ವಾಪಾಸ್ಸಾಗಬೇಕಿತ್ತು. ಆದರೆ ಪ್ರಕಾಶ್​ ಚಂದ್ರ ಮತ್ತಾತನ ಸಹಚರರು ನನ್ನನ್ನ ಹಳ್ಳಿಯೊಂದರಲ್ಲಿ ಇರಿಸಿದರು. ಅಲ್ಲದೇ ಅವರ ಮಾತನ್ನ ಕೇಳದಿದ್ದರೆ ಅಲ್ಲೇ ಬಿಟ್ಟು ಬರೋದಾಗಿ ಬೆದರಿಕೆ ಹಾಕಿದ್ದರು ಅಂತಾ ಹೇಳಿಕೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...