ಬಾಲಿವುಡ್ ನಟಿ ಅಮಿಷಾ ಪಟೇಲ್ರದ್ದು ಎನ್ನಲಾದ ಆಡಿಯೋ ಮೆಸೇಜ್ ಒಂದು ವೈರಲ್ ಆಗ್ತಿದ್ದು, ಇದರಲ್ಲಿ ಅಮಿಷಾ ಪಟೇಲ್ ತಮಗೆ ಬಿಹಾರದಲ್ಲಿ ಬೆದರಿಕೆ ಇದೆ ಅಂತಾ ಹೇಳಿಕೊಂಡಿದ್ದಾರೆ.
ಆಡಿಯೋದಲ್ಲಿ ಅಮಿಷಾ ತನಗೆ ಎಲ್ಜೆಪಿ ನಾಯಕ ಡಾ. ಪ್ರಕಾಶ್ ಚಂದ್ರ ಅವರಿಂದ ಬೆದರಿಕೆ ಇದೆ ಅಂತಾ ಹೇಳಿದ್ದಾರೆ. ಆತ ಒಬ್ಬ ಅಪಾಯಕಾರಿ ವ್ಯಕ್ತಿ. ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು ಮಾತ್ರವಲ್ಲದೇ ನಾನು ಮುಂಬೈಗೆ ಹಿಂದಿರುಗಿದ ಬಳಿಕವೂ ನನಗೆ ಬೆದರಿಕೆವೊಡ್ಡುತ್ತಿದ್ದಾರೆ ಅಂತಾ ಹೇಳಿದ್ದಾರೆ.
ಪಾಟ್ನಾದಲ್ಲಿ ನಡೆಯಲಿರುವ 3 ಗಂಟೆಗಳ ಚುನಾವಣಾ ರ್ಯಾಲಿಯಲ್ಲಿ ನೀನು ನನ್ನ ಜೊತೆ ಇರಬೇಕು ಅಂತಾ ನನಗೆ ಆವಾಜ್ ಹಾಕಿದ್ದರು. ನಾನು ಅದೇ ದಿನ ಸಂಜೆ ವಿಮಾನದ ಮೂಲಕ ವಾಪಾಸ್ಸಾಗಬೇಕಿತ್ತು. ಆದರೆ ಪ್ರಕಾಶ್ ಚಂದ್ರ ಮತ್ತಾತನ ಸಹಚರರು ನನ್ನನ್ನ ಹಳ್ಳಿಯೊಂದರಲ್ಲಿ ಇರಿಸಿದರು. ಅಲ್ಲದೇ ಅವರ ಮಾತನ್ನ ಕೇಳದಿದ್ದರೆ ಅಲ್ಲೇ ಬಿಟ್ಟು ಬರೋದಾಗಿ ಬೆದರಿಕೆ ಹಾಕಿದ್ದರು ಅಂತಾ ಹೇಳಿಕೊಂಡಿದ್ದಾರೆ.