alex Certify ಕೊರೊನಾ ಸೋಂಕಿಗೆ ಒಳಗಾಗಿದ್ದನ್ನ ದೃಢಪಡಿಸಿದ ನೀತು ಕಪೂರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿಗೆ ಒಳಗಾಗಿದ್ದನ್ನ ದೃಢಪಡಿಸಿದ ನೀತು ಕಪೂರ್​

ಬಾಲಿವುಡ್​ ಹಿರಿಯ ನಟಿ ನೀತು ಕಪೂರ್​ ತಮ್ಮ ಇನ್ಸ್​ಟಾಗ್ರಾಂ ಪೋಸ್ಟ್​ ಮೂಲಕ ತಮಗೆ ಕೊರೊನಾ ಸೋಂಕು ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. 62 ವರ್ಷದ ಈ ನಟಿ ಈ ವಾರದ ಆರಂಭದಲ್ಲಿ ಕೊರೊನಾ ವೈರಸ್​ ದಾಳಿಗೆ ಒಳಗಾಗಿದ್ದರು. ನೀತು ಕಪೂರ್​ ಕಳೆದ ವಾರ ‘ಜುಗ್​ ಜುಗ್​ ಜಿಯೋ’ ಸಿನಿಮಾ ಶೂಟಿಂಗ್​ಗಾಗಿ ವರುಣ್​ ಧವನ್​ ಹಾಗೂ ಅನಿಲ್​ ಕಪೂರ್​ರೊಂದಿಗೆ ಚಂಡೀಗಡ್​ನಲ್ಲಿ ಇದ್ದ ವೇಳೆ ವೈರಸ್​ಗೆ ತುತ್ತಾಗಿದ್ದಾರೆ.

ಅನಿಲ್​ ಕಪೂರ್​ರನ್ನ ಒಬ್ಬರನ್ನ ಹೊರತುಪಡಿಸಿ ವರುಣ್​ ಧವನ್​, ಮನೀಷ್​ ಪೌಲ್​ ಹಾಗೂ ನೀತು ಕಪೂರ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಾರದ ಆರಂಭದಲ್ಲಿ ನನಗೆ ಕೊರೊನಾ ಸೋಂಕು ಇರೋದು ದೃಢಪಟ್ಟಿದೆ. ಕೊರೊನಾ ಸಂಬಂಧಿ ಎಲ್ಲಾ ಸುರಕ್ಷಿತ ಕ್ರಮಗಳನ್ನ ಅನುಸರಿಸಲಾಗುತ್ತಿದೆ. ವೈದ್ಯರ ಸಲಹೆಯಂತೆ ನಾನು ಔಷಧಿಗಳನ್ನ ತೆಗೆದುಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಚಿರಋಣಿ. ಮಾಸ್ಕ್​​ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಕಾಳಜಿಯಿಂದಿರಿ ಅಂತಾ ನೀತು ಕಪೂರ್​ ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

View this post on Instagram

A post shared by neetu Kapoor. Fightingfyt (@neetu54)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...