ಬಾಲಿವುಡ್ ಹಿರಿಯ ನಟಿ ನೀತು ಕಪೂರ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ತಮಗೆ ಕೊರೊನಾ ಸೋಂಕು ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. 62 ವರ್ಷದ ಈ ನಟಿ ಈ ವಾರದ ಆರಂಭದಲ್ಲಿ ಕೊರೊನಾ ವೈರಸ್ ದಾಳಿಗೆ ಒಳಗಾಗಿದ್ದರು. ನೀತು ಕಪೂರ್ ಕಳೆದ ವಾರ ‘ಜುಗ್ ಜುಗ್ ಜಿಯೋ’ ಸಿನಿಮಾ ಶೂಟಿಂಗ್ಗಾಗಿ ವರುಣ್ ಧವನ್ ಹಾಗೂ ಅನಿಲ್ ಕಪೂರ್ರೊಂದಿಗೆ ಚಂಡೀಗಡ್ನಲ್ಲಿ ಇದ್ದ ವೇಳೆ ವೈರಸ್ಗೆ ತುತ್ತಾಗಿದ್ದಾರೆ.
ಅನಿಲ್ ಕಪೂರ್ರನ್ನ ಒಬ್ಬರನ್ನ ಹೊರತುಪಡಿಸಿ ವರುಣ್ ಧವನ್, ಮನೀಷ್ ಪೌಲ್ ಹಾಗೂ ನೀತು ಕಪೂರ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಾರದ ಆರಂಭದಲ್ಲಿ ನನಗೆ ಕೊರೊನಾ ಸೋಂಕು ಇರೋದು ದೃಢಪಟ್ಟಿದೆ. ಕೊರೊನಾ ಸಂಬಂಧಿ ಎಲ್ಲಾ ಸುರಕ್ಷಿತ ಕ್ರಮಗಳನ್ನ ಅನುಸರಿಸಲಾಗುತ್ತಿದೆ. ವೈದ್ಯರ ಸಲಹೆಯಂತೆ ನಾನು ಔಷಧಿಗಳನ್ನ ತೆಗೆದುಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಚಿರಋಣಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಕಾಳಜಿಯಿಂದಿರಿ ಅಂತಾ ನೀತು ಕಪೂರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
https://www.instagram.com/p/CIm4kGUg5l_/?utm_source=ig_web_copy_link