ಡಿಸ್ನಿ + ಹಾಟ್ಸ್ಟಾರ್ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮೀ ಬಾಂಬ್ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಹೊಸ ವಿವಾದವೊಂದು ಮೈಗಂಟಿದೆ. ಈ ಸಿನಿಮಾದ ಟೈಟಲ್ ನ್ನ ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ಚಿತ್ರದ ನಿರ್ಮಾಪಕರಿಗೆ ಕರ್ಣಿ ಸೇನಾದಿಂದನೋಟಿಸ್ ನೀಡಲಾಗಿದೆ.
ಸಿನಿಮಾಗೆ ಲಕ್ಷ್ಮೀ ದೇವರ ಹೆಸರನ್ನ ನೀಡಲಾಗಿದೆ. ಇದು ಹಿಂದೂ ಧರ್ಮದ ಸಿದ್ಧಾಂತ, ಪದ್ದತಿ ಹಾಗೂ ಘನತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಹೀಗಾಗಿ ಈ ಹೆಸರನ್ನ ಬದಲಾವಣೆ ಮಾಡಬೇಕು ಅಂತಾ ಆಗ್ರಹಿಸಲಾಗಿದೆ.
ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮೀ ಬಾಂಬ್ ದೀಪಾವಳಿ ಹಬ್ಬದ ವಿಶೇಷವಾಗಿ ನವೆಂಬರ್ 9ರಂದು ಡಿಜಿಟಲ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರ ತಮಿಳು ಬ್ಲಾಕ್ಬಸ್ಟರ್ ಸಿನಿಮಾ ಮುನಿ 2: ಕಾಂಚನಾ ಚಿತ್ರದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ತೃತೀಯ ಲಿಂಗಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.