alex Certify ಗುರು ಪೂರ್ಣಿಮೆಯಂದು ತಂದೆಯನ್ನ ನೆನೆದು ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದ ಬಾಲಿವುಡ್​ ‘ಸಿಂಗಂ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುರು ಪೂರ್ಣಿಮೆಯಂದು ತಂದೆಯನ್ನ ನೆನೆದು ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದ ಬಾಲಿವುಡ್​ ‘ಸಿಂಗಂ’

ಬಾಲಿವುಡ್​ ನಟ ಅಜಯ್​ ದೇವಗನ್​ ಸೋಶಿಯಲ್​ ಮೀಡಿಯಾದ ಮೂಲಕ ತಮ್ಮ ತಂದೆ ವೀರು ದೇವಗನ್​ರನ್ನು ನೆನೆದಿದ್ದಾರೆ. ಗುರುಪೂರ್ಣಿಮೆ ದಿನವಾದ ಇಂದು ಅಜಯ್​ ದೇವಗನ್​ ತಂದೆಯ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡುವ ಮೂಲಕ ತಂದೆಯಿಂದ ತಾವು ಜೀವನ ಪಾಠ ಕಲಿತಿರೋದಾಗಿ ಬರೆದಿದ್ದಾರೆ.

ಈ ವಿಶೇಷ ದಿನದಂದು ನನ್ನ ತಂದೆ ವೀರು ದೇವಗನ್​​ಗೆ ನಮನ ಸಲ್ಲಿಸುವೆ. ಜೀವನ ಹಾಗೂ ವೃತ್ತಿಯ ಬಗ್ಗೆ ಇವರಿಂದ ಪಾಠ ಕಲಿತ ನಾನೇ ಧನ್ಯ. ಅವರಿಂದ ಕಲಿತ ಪಾಠವನ್ನ ನಾನು ಜೀವನಪೂರ್ತಿ ಅನುಸರಿಸುತ್ತೇನೆ ಎಂದು ಟ್ವೀಟಾಯಿಸಿದ್ದಾರೆ.

ಕಳೆದ ತಿಂಗಳು ತಂದೆ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ತಂದೆಯ ಫೋಟೋವನ್ನ ಶೇರ್​ ಮಾಡಿದ್ದರು. ನಿಮ್ಮನ್ನ ಪ್ರತಿದಿನ ಮಿಸ್​ ಮಾಡಿಕೊಳ್ಳುತ್ತೇನೆ. ಇಂದು ತುಸು ಹೆಚ್ಚಾಗಿಯೇ ನೀವು ನೆನಪಿಗೆ ಬರುತ್ತಿದ್ದೀರಿ. ಜನ್ಮದಿನದ ಶುಭಾಶಯಗಳು ಎಂದು ಶೀರ್ಷಿಕೆ ನೀಡಿದ್ದರು. ವೀರು ಮೇ 2019ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.

— Ajay Devgn (@ajaydevgn) July 24, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...