
ಈ ವಿಶೇಷ ದಿನದಂದು ನನ್ನ ತಂದೆ ವೀರು ದೇವಗನ್ಗೆ ನಮನ ಸಲ್ಲಿಸುವೆ. ಜೀವನ ಹಾಗೂ ವೃತ್ತಿಯ ಬಗ್ಗೆ ಇವರಿಂದ ಪಾಠ ಕಲಿತ ನಾನೇ ಧನ್ಯ. ಅವರಿಂದ ಕಲಿತ ಪಾಠವನ್ನ ನಾನು ಜೀವನಪೂರ್ತಿ ಅನುಸರಿಸುತ್ತೇನೆ ಎಂದು ಟ್ವೀಟಾಯಿಸಿದ್ದಾರೆ.
ಕಳೆದ ತಿಂಗಳು ತಂದೆ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ತಂದೆಯ ಫೋಟೋವನ್ನ ಶೇರ್ ಮಾಡಿದ್ದರು. ನಿಮ್ಮನ್ನ ಪ್ರತಿದಿನ ಮಿಸ್ ಮಾಡಿಕೊಳ್ಳುತ್ತೇನೆ. ಇಂದು ತುಸು ಹೆಚ್ಚಾಗಿಯೇ ನೀವು ನೆನಪಿಗೆ ಬರುತ್ತಿದ್ದೀರಿ. ಜನ್ಮದಿನದ ಶುಭಾಶಯಗಳು ಎಂದು ಶೀರ್ಷಿಕೆ ನೀಡಿದ್ದರು. ವೀರು ಮೇ 2019ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.