alex Certify ಸುಶಾಂತ್ ಸಿಂಗ್ ಸಾವಿನ ಬಗ್ಗೆ ಏಮ್ಸ್ ವರದಿಯಲ್ಲೇನಿದೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಸಿಂಗ್ ಸಾವಿನ ಬಗ್ಗೆ ಏಮ್ಸ್ ವರದಿಯಲ್ಲೇನಿದೆ….?

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಬಗ್ಗೆ ಮಹತ್ವದ ಸುದ್ದಿ ಹೊರ ಬಿದ್ದಿದೆ. ಸುಶಾಂತ್ ಸಿಂಗ್ ಹತ್ಯೆಯಾಗಿಲ್ಲ. ಇದು ಆತ್ಮಹತ್ಯೆ ಎಂದು ಏಮ್ಸ್ ವೈದ್ಯರ ತಂಡ ಸಿಬಿಐಗೆ ತನ್ನ ವರದಿ ನೀಡಿದೆ ಎನ್ನಲಾಗಿದೆ. ಸುಶಾಂತ್ ಸಿಂಗ್ ಹತ್ಯೆಯಾಗಿದೆ ಎಂದು ಅವರ ಕುಟುಂಬಸ್ಥರು ಮತ್ತು ವಕೀಲರು ವಾದಿಸಿದ್ದರು.

34 ವರ್ಷದ ಸುಶಾಂತ್ ಸಿಂಗ್ ಶವ ಜೂನ್ 14ರಂದು ನೇಣು ಬಿಗಿದ ಸ್ಥಿತಿಯಲ್ಲಿ ಫ್ಲಾಟ್ ನಲ್ಲಿ ಪತ್ತೆಯಾಗಿತ್ತು. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮುಂಬೈ ಪೊಲೀಸರು ಅಂದಾಜಿಸಿದ್ದರು. ಆದ್ರೆ ಕುಟುಂಬಸ್ಥರ ವಾದ ಅನೇಕ ಅನುಮಾನಗಳನ್ನು ಹುಟ್ಟಿ ಹಾಕಿತ್ತು. ನಂತ್ರ ಸಿಬಿಐ ಪ್ರಕರಣದ ವಿಚಾರಣೆ ಶುರು ಮಾಡಿತ್ತು.

ಮರಣೋತ್ತರ ಪರೀಕ್ಷೆ ನಡೆಸಿದ ಏಮ್ಸ್ ಆಸ್ಪತ್ರೆ ವೈದ್ಯರು ಈಗ ಸಿಬಿಐಗೆ ವರದಿ ನೀಡಿದ್ದಾರೆ. ಸುಶಾಂತ್ ದೇಹದಲ್ಲಿ ಯಾವುದೇ ವಿಷ ಹಾಗೂ ಡ್ರಗ್ಸ್ ಅಂಶವಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ ಎನ್ನಲಾಗ್ತಿದೆ. ಹಾಗೆ ಇದು ಆತ್ಮಹತ್ಯೆ ಎಂದು ಏಮ್ಸ್ ವರದಿ ನೀಡಿದೆ. ಸಿಬಿಐ ತನಿಖೆ ಮುಂದುವರೆಸಲಿದೆ. ಆತ್ಮಹತ್ಯೆಗೆ ಪ್ರಚೋದನೆ ನಿಟ್ಟಿನಲ್ಲಿ ತನಿಖೆ ಮುಂದುವರೆಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...