alex Certify ಪ್ರೇಯಸಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭ ಕೋರಿದ ಸುನಿಲ್​ ಶೆಟ್ಟಿ ಪುತ್ರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಯಸಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭ ಕೋರಿದ ಸುನಿಲ್​ ಶೆಟ್ಟಿ ಪುತ್ರ..!

ಬಾಲಿವುಡ್​ ನಟ ಸುನಿಲ್​ ಶೆಟ್ಟಿ ಪುತ್ರ ಅಹಾನ್​ ಶೆಟ್ಟಿ ತಮ್ಮ ಗರ್ಲ್​ಫ್ರೆಂಡ್​ ತಾನಿಯಾ ಶ್ರಾಫ್​ ಜೊತೆಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ತಾನಿಯಾ ಶ್ರಾಫ್​ ಬರ್ತಡೇ ದಿನ ಅಹಾನ್ ಶೆಟ್ಟಿ ಕೆಲ ಸುಂದರ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಬಾಲ್ಯದ ಗೆಳತಿ ಜೊತೆಗಿನ ಹಳೆಯ ಫೋಟೋ ಶೇರ್​ ಮಾಡಿರುವ ಅಹಾನ್,​ ಹ್ಯಾಪಿ ಬರ್ತಡೇ ಬೆಬೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗೆ ತಾನ್ಯಾ ಐ ಮಿಸ್​ ಯೂ ಎಂದು ಕಮೆಂಟ್​ ಹಾಕಿದ್ದನ್ನ ನೋಡ್ತಿದ್ರೆ ಲವ್ ಬರ್ಡ್ಸ್​ ಬರ್ತಡೇ ದಿನವನ್ನ ಒಟ್ಟಿಗೆ ಎಂಜಾಯ್​ ಮಾಡೋಕೆ ಸಾಧ್ಯವಾಗಿಲ್ಲ ಎಂದೆನಿಸುತ್ತಿದೆ. ಇನ್​ಸ್ಟಾಗ್ರಾಂ ಪೋಸ್ಟ್ ಮಾತ್ರವಲ್ಲದೇ ಸ್ಟೋರಿ ವಿಭಾಗದಲ್ಲೂ ಫೋಟೋಗಳನ್ನ ಶೇರ್​ ಮಾಡಿರುವ ಅಹಾನ್,​ ಐ ಲವ್​ ಯೂ ಎಂದು ಬರೆದುಕೊಂಡಿದ್ದಾರೆ.

ತಾನಿಯಾ ಶ್ರಾಫ್​ ಮುಂಬೈನಲ್ಲಿ ಡಿಸೈನರ್​ ಆಗಿ ಕೆಲಸ ಮಾಡ್ತಿದ್ದಾರೆ. ಅಹಾನ್​ ಹಾಗೂ ತಾನಿಯಾ ಬಾಲ್ಯದ ಸ್ನೇಹಿತರೂ ಕೂಡ ಹೌದು. ತಾನಿಯಾಗೆ ಅಹಾನ್ ಸಹೋದರಿ ಆತಿಯಾ ಶೆಟ್ಟಿ ಕೂಡ ಒಳ್ಳೆಯ ಗೆಳತಿಯಾಗಿದ್ದು ಆಕೆ ಕೂಡ ಇನ್​ಸ್ಟಾಗ್ರಾಂನಲ್ಲಿ ತಾನಿಯಾಗೆ ವಿಶ್ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...