alex Certify ಬಾಲಿವುಡ್ ಹಾಡಿಗೆ ಅಮೆರಿಕಾದ ಅಪ್ಪ – ಮಗನಿಂದ ಹೆಜ್ಜೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಹಾಡಿಗೆ ಅಮೆರಿಕಾದ ಅಪ್ಪ – ಮಗನಿಂದ ಹೆಜ್ಜೆ…!

ಬಾಲಿವುಡ್​ ಸಿನಿಮಾದ ಹಾಡುಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಸದ್ದು ಮಾಡ್ತಾನೇ ಇರ್ತಾವೆ. ಈ ಮಾತಿಗೆ ಸಾಕ್ಷಿ ಎಂಬಂತೆ ವಿದೇಶಿಗರಾದ ರಿಕಿ ಎಲ್​ ಪಾಂಡ್​ ಎಂಬವರು ಬಾಲಿವುಡ್​ನ ಹಳೆಯ ಸಿನಿಮಾದ ಗೀತೆಯೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಸುದ್ದಿಯಾಗಿದ್ದಾರೆ.

ಓ ಬೇಟಾ ಜಿ ಎಂದೂ ಫೇಮಸ್​ ಆಗಿರುವ ಕಿಸ್ಮತ್​ ಕಿ ಹವಾ ಕಭಿ ನರಮ್​ ಎಂಬ ಹಾಡಿಗೆ ರಿಕಿ ಮತ್ತವರ ಪುತ್ರ ನೃತ್ಯ ಮಾಡುತ್ತಿರುವ ಸಂತೋಷಕರ ವಿಡಿಯೋ ಇಂಟರ್ನೆಟ್​ ಸುತ್ತ ಹರಿದಾಡುತ್ತಿದೆ. ಗೀತಾ ಬಲಿ ಎಂಬ ಹಿಂದಿ ಸಿನಿಮಾದ ಹಾಡನ್ನ ಅನುರಾಗ್​ ಬಸು ನಿರ್ಮಾಣದ ಲುಡೋ ಸಿನಿಮಾದಲ್ಲಿ ರೀಮಿಕ್ಸ್ ಮಾಡಲಾಗಿತ್ತು.

ತಂದೆ – ಮಗ ಜೋಡಿಯಾಗಿ ಮಾಡಿರುವ ಈ ನೃತ್ಯ ನೋಡಿ ನಿಮಗೂ ನೃತ್ಯ ಮಾಡಬೇಕು ಎನಿಸಬಹುದು. ರಿಕಿ ಈ ಹಿಂದೆ ಗುಂಗ್ರೂ ಹಾಗೂ ರಂಜೆಲೋ ಮಾರೋ ಥೋಲ್ನಾ ಎಂಬ ಹಾಡಿಗೂ ನೃತ್ಯ ಮಾಡಿ ಸುದ್ದಿಯಾಗಿದ್ದರು.

https://www.instagram.com/p/CJkal1yhQB6/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...