alex Certify ಆಮೀರ್​ ಖಾನ್​ ಬಳಿಕ ಕೊರೊನಾ ಸೋಂಕಿಗೆ ಒಳಗಾದ ಮತ್ತೊಬ್ಬ 3 ಈಡಿಯಟ್ಸ್​ ನಟ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮೀರ್​ ಖಾನ್​ ಬಳಿಕ ಕೊರೊನಾ ಸೋಂಕಿಗೆ ಒಳಗಾದ ಮತ್ತೊಬ್ಬ 3 ಈಡಿಯಟ್ಸ್​ ನಟ….!

ದೇಶದಲ್ಲಿ ಕೋವಿಡ್​ 19 ಎರಡನೆಯ ಅಲೆ ಜೋರಾಗಿದೆ. ಬಾಲಿವುಡ್​ ಸಿನಿ ಲೋಕದಲ್ಲೂ ಕೊರೊನಾ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಇದೀಗ ಈ ಸಾಲಿಗೆ ಆರ್​. ಮಾಧವನ್ ಕೂಡ ಸೇರಿದ್ದಾರೆ. ಈ ಬಗ್ಗೆ ಆರ್​. ಮಾಧವನ್ ಅಧಿಕೃತ ಮಾಹಿತಿ ನೀಡಿದ್ದಾರೆ.

ನಿನ್ನೆಯಷ್ಟೇ ಬಾಲಿವುಡ್ ನಟ ಆಮೀರ್ ಖಾನ್​ ಕೊರೊನಾ ಸೋಂಕಿಗೆ ಒಳಗಾಗಿದ್ದರ ಬಗ್ಗೆ ಅವರ ವಕ್ತಾರ ಮಾಹಿತಿ ನೀಡಿದ್ರು. ಹೀಗಾಗಿ 3 ಇಡಿಯಟ್ಸ್ ಸಿನಿಮಾ ಶೈಲಿಯಲ್ಲೇ ಮಾಧವನ್​ ತಾವು ಸೋಂಕಿಗೆ ಒಳಗಾಗಿರೋದ್ರ ಬಗ್ಗೆ ಮಾಹಿತಿ ನೀಡಿದ್ದಾರೆ. ಫರ್ಹಾನ್​ ಎಂದಿಗೂ ರಾಂಚೋವನ್ನ ಅನುಸರಿಸುತ್ತಾನೆ. ಕೊರೊನಾ ಎಂದಿಗೂ ನಮ್ಮ ಸುತ್ತಲೇ ಇತ್ತು. ಆದರೆ ಈಗ ನಾವು ಈ ವೈರಸ್​ ದಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ಆದರೆ ಎಲ್ಲವೂ ಒಳ್ಳೆಯದಾಗುತ್ತದೆ. ಶೀಘ್ರದಲ್ಲೇ ಕೊರೊನಾ ವಾಸಿಯಾಗಲಿದೆ. ಆದರೆ ಈ ಸ್ಥಳಕ್ಕೆ ರಾಜು ಬಾರದೇ ಇರಲಿ ಎಂದು ನಾನು ಪ್ರಾರ್ಥಿಸುವೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.  ಈ ಸಿನಿಮಾದಲ್ಲಿ ಅವರು ಪ್ರಾಂಶುಪಾಲರಿಗೆ ವೈರಸ್​ ಎಂದು ಹೆಸರಿಟ್ಟಿದ್ದರು ಅನ್ನೋದನ್ನ ನಾವಿಲ್ಲಿ ನೆನೆಸಿಕೊಳ್ಳಬಹುದಾಗಿದೆ.

ಈಗಾಗಲೇ ರಣಬೀರ್​ ಕಪೂರ್​, ಕಾರ್ತಿಕ್​ ಆರ್ಯನ್​, ಮನೋಜ್​ ಬಾಜಪೇಯಿ, ಸತೀಶ್​ ಕೌಶಿಕ್​, ಸಿದ್ಧಾಂತ್​ ಚತುರ್ವೇದಿ ಸೇರಿದಂತೆ ಅನೇಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...