alex Certify ಬಾಲಿವುಡ್​ನ ಮತ್ತೊಬ್ಬ ತಾರೆಗೆ ಕೋವಿಡ್ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ನ ಮತ್ತೊಬ್ಬ ತಾರೆಗೆ ಕೋವಿಡ್ ಸೋಂಕು

ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳ ಶೂಟಿಂಗ್​ ಆರಂಭವಾದಾಗಿನಿಂದ ಒಬ್ಬರಲ್ಲ ಒಬ್ಬ ತಾರೆಯರು ಕೊರೊನಾ ವೈರಸ್​​ ಸೋಂಕಿಗೆ ಒಳಗಾಗುತ್ತಲೇ ಇದ್ದಾರೆ. ಈಗಾಗಲೇ ವರುಣ್​ ಧವನ್​, ನೀತು ಕಪೂರ್​, ಮನಿಷ್​ ಪೌಲ್​ ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಸಿಕ್ಕ ಕೆಲವೇ ಗಂಟೆಗಳಲ್ಲಿ ಈ ಸಾಲಿಗೆ ಇನ್ನೊಬ್ಬ ನಟಿ ಸೇರಿದ್ದಾರೆ.

‘ಅಪ್ನಾ ಭಿ ಟೈಮ್​ ಆಯೇಗಾ’ದ ನಟಿ ತನ್ನಾಜ್​ ಇರಾನಿ ಕೋವಿಡ್​ ಸೋಂಕು ದೃಢಪಟ್ಟಿದೆ. ಸೋಶಿಯಲ್​ ಮೀಡಿಯಾದಲ್ಲಿ ನಟಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ನಟಿ ತನ್ನಾಜ್​, ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ಆದರೆ ನನ್ನಿಂದ ಯಾರಿಗೂ ಸೋಂಕು ತಾಕದೇ ಇರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...