ಕನ್ನಡ ಬಿಗ್ಬಾಸ್ 3ರ ಸ್ಪರ್ಧಿ ನಟಿ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಗೊಲ್ಲರಹಟ್ಟಿಯಲ್ಲಿರುವ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ನಟಿ ಜಯಶ್ರೀ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ರೂಪದರ್ಶಿಯಾಗಿದ್ದ ಜಯಶ್ರೀ ಬಿಗ್ ಬಾಸ್ ಕನ್ನಡ ಸೀಸನ್ 3ರಲ್ಲಿ ಸ್ಪರ್ಧಿಯಾಗಿ ಬರುವ ಮೂಲಕ ಖ್ಯಾತಿ ಪಡೆದಿದ್ದರು. ಈ ನಟಿ ಉಪ್ಪು ಹುಳಿ ಖಾರ, ಕನ್ನಡ್ ಗೊತ್ತಿಲ್ಲ ಸೇರಿದಂತೆ ಬೆರಳಣಿಕೆಯಷ್ಟು ಸಿನಿಮಾದಲ್ಲಿ ನಟಿಸಿದ್ದರು.
ಬಳಿಕ ಜಯಶ್ರೀಗೆ ಖುದ್ದು ನಟ ಸುದೀಪ್ ಸಾಂತ್ವಾನದ ಮಾತುಗಳನ್ನ ಆಡಿದ್ದರು. ಜೀವನದಲ್ಲಿ ಬರುವ ಕಷ್ಟ, ಸವಾಲುಗಳನ್ನ ಎದುರಿಸೋಕೆ ಕಲಿತುಕೊಳ್ಳಿ . ನಿಮ್ಮ ಜೀವನವನ್ನ ನೀವು ಪ್ರೀತಿಸೋದನ್ನ ಕಲಿತುಕೊಳ್ಳಿ ಎಂದು ಬುದ್ಧಿವಾದದ ಮಾತುಗಳನ್ನಾಡಿದ್ದರು.