alex Certify 8 ವರ್ಷವಿದ್ದಾಗಲೇ ನಟಿಯಾಗುವ ಕನಸು ಬಿಚ್ಚಿಟ್ಟಿದ್ದ ಆಲಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ವರ್ಷವಿದ್ದಾಗಲೇ ನಟಿಯಾಗುವ ಕನಸು ಬಿಚ್ಚಿಟ್ಟಿದ್ದ ಆಲಿಯಾ

ಆಲಿಯಾ ಭಟ್ ಬಾಲಿವುಡ್ ನ ಖ್ಯಾತ ನಟಿ. ಅವರು 8 ನೇ ವರ್ಷದಲ್ಲೆ ನಾನು ನಟಿಯಾಗುವೆ ಎಂದು ಹೇಳಿರುವ ವಿಡಿಯೋ ಒಂದು ಈಗ ಸದ್ದು ಮಾಡುತ್ತಿದೆ.

ಆಲಿಯಾ ಭಟ್ ತಂದೆ ಪ್ರಖ್ಯಾತ ನಿರ್ದೇಶಕ ಮಹೇಶ್ ಭಟ್ ಮತ್ತು ಅಕ್ಕ ನಟಿ ಪೂಜಾ ಭಟ್, ಸುರೇಶ್ ಒಬೆರಾಯ್
ಅವರು ನಡೆಸಿಕೊಡುತ್ತಿದ್ದ “ಜೀನಾ ಇಸಿಕಾ ನಾಮ್ ಹೈ” ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ನಡೆದ ಘಟನೆ ಇದಾಗಿದೆ.

ಮಹೇಶ್ ಭಟ್ ಮತ್ತು ಪತ್ನಿ ಸೋನಿ ರಾಝ್ಧನ್ ತಮ್ಮ ಪುತ್ರಿಯರನ್ನು ಪರಿಚಯಿಸುವ ವೇಳೆ ಆಲಿಯಾ ಮತ್ತು ಅವರ ಅಕ್ಕ ಶಾಹೀನ್ ಒಟ್ಟಿಗೆ ವೇದಿಕೆಗೆ ಬರುತ್ತಾರೆ. ಶಾಹೀನ್ ಬಳಿ ದೊಡ್ಡವಳಾದ ಮೇಲೆ ಏನಾಗಲು ಬಯಸುವೆ ಎಂದು ಕೇಳಿದಾಗ ನಾನು ಬರಹಗಾರ್ತಿ ಆಗುತ್ತೇನೆ ಎಂದು ಹೇಳುತ್ತಾಳೆ. ಹಾಗೆ ಆಲಿಯಾ ಅವರನ್ನು ಕೇಳಿದಾಗ ನಾನು ನಟಿಯಾಗುತ್ತೇನೆ ಎಂದು ಹೇಳುತ್ತಾಳೆ.

ಈ ವಿಡಿಯೋ 89 ಸಾವಿರ ವೀಕ್ಷಣೆಯನ್ನು ಇನ್ಸ್ಟಾಗ್ರಾಂ‌ ನಲ್ಲಿ ಪಡೆದಿದೆ. ಆಲಿಯಾ, ಧೋನಿ ಪುತ್ರಿ ಜೀವಾ ತರ ಕಾಣುತ್ತಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ವಿಡಿಯೋವನ್ನು ಪದೇ ಪದೇ ನೋಡಲು ಮನಸಾಗುತ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...