ಕೆಲ ದಿನಗಳ ಹಿಂದೆ ಬ್ರೇನ್ ಸ್ಟ್ರೋಕ್ಗೆ ಒಳಗಾಗಿದ್ದ ಹಿರಿಯ ನಟ ರಾಹುಲ್ ರಾಯ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ವಿಡಿಯೋವನ್ನ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ ಚೇತರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿರುವ 52 ವರ್ಷದ ನಟನನ್ನ ಕುಟುಂಬ ಸದಸ್ಯರು ಭೇಟಿ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲೂ ಇದೇ ವಿಚಾರ ಶೇರ್ ಮಾಡಿರುವ ಹಿರಿಯ ನಟ ರಾಹುಲ್ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.
https://www.instagram.com/p/CIfHfM3JkQ8/?utm_source=ig_web_copy_link