alex Certify ಮತ್ತೊಮ್ಮೆ ಬಿಜೆಪಿ ಸೇರ್ಪಡೆಯಾದ ನಟಿ ವಿಜಯಶಾಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಬಿಜೆಪಿ ಸೇರ್ಪಡೆಯಾದ ನಟಿ ವಿಜಯಶಾಂತಿ

ಗೃಹ ಸಚಿವ ಅಮಿತ್​ ಶಾರನ್ನ ಭೇಟಿಯಾದ ಕೇವಲ ಒಂದು ದಿನದ ಬಳಿಕ ವಾರಾಂತ್ಯದಲ್ಲಿ ಕಾಂಗ್ರೆಸ್​ ಪಕ್ಷವನ್ನ ತೊರೆದಿದ್ದ ನಟಿ – ರಾಜಕಾರಣಿ ವಿಜಯಶಾಂತಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
54 ವರ್ಷದ ವಿಜಯಶಾಂತಿ 1997ರಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ತಾರೆಯಾಗಿದ್ದ ಸಂದರ್ಭದಲ್ಲೇ ಬಿಜೆಪಿಯಿಂದ ರಾಜಕೀಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರತ್ಯೇಕ ತೆಲಂಗಾಣ ಹೋರಾಟದ ಸಂದರ್ಭದಲ್ಲಿ ವಿಜಯಶಾಂತಿ ಬಿಜೆಪಿ ತೊರೆದು ಟಿಆರ್​ಎಸ್​ ಸೇರ್ಪಡೆಯಾದರು. 2009ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಆಂಧ್ರಪ್ರದೇಶದಿಂದ ಬೇರ್ಪಟ್ಟು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಘೋಷಣೆಯಾಗುವ ಮುನ್ನವೇ ಅಂದರೆ 2014ರಲ್ಲಿ ವಿಜಯಶಾಂತಿ ಕಾಂಗ್ರೆಸ್​ ಸೇರಿದ್ದರು.
2023ರ ಚುನಾವಣೆಗೆ ತೆಲಂಗಾಣದಲ್ಲಿ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೆ ವಿಜಯಶಾಂತಿ ಬಿಜೆಪಿಗೆ ಮರಳಿ ಬಂದಿದ್ದಾರೆ. ತಮಿಳುನಾಡಿನಲ್ಲಿ ಖುಷ್ಬೂ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಇದೀಗ ಮತ್ತೊಬ್ಬ ಹಿರಿಯ ನಟಿ ವಿಜಯಶಾಂತಿ ಕೂಡ ಖುಷ್ಬೂ ದಾರಿಯನ್ನೇ ತುಳಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...