alex Certify ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಅಮೀರ್‌ ಪುತ್ರಿಯ ಹಾಟ್‌ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಅಮೀರ್‌ ಪುತ್ರಿಯ ಹಾಟ್‌ ಫೋಟೋ

ಕೊರೊನಾದ ಮಾರ್ಗಸೂಚಿಗಳನ್ನ ಪಾಲಿಸಿಕೊಂಡು ಪ್ರವಾಸಕ್ಕೆ ಹೊರಡೋದು ಅಂದ್ರೆ ಸುಲಭದ ಕೆಲಸವಲ್ಲ. ಕಟ್ಟುನಿಟ್ಟಿನ ನಿಯಮಾವಳಿಗಳ ನಡುವೆ ಇನ್ನೆಲ್ಲಿ ಎಂಜಾಯ್​ಮೆಂಟ್​ ಅಂತಾ ಅನೇಕರು ಈ ವರ್ಷ ತಮ್ಮ ಟ್ರಿಪ್​ ಪ್ಲಾನ್​ನ್ನೇ ಕೈಬಿಟ್ಟಿದ್ದಾರೆ.

ಆದರೆ ಬಾಲಿವುಡ್​ ನಟ ಆಮೀರ್ ಖಾನ್​ ಪುತ್ರಿ ಇರಾ ಮುಂಬೈನ ಲೋನಾವಾಲಾ ಗಿರಿಧಾಮಕ್ಕೆ ಸಣ್ಣ ಪ್ರವಾಸ ಕೈಗೊಂಡಿದ್ದು ಆಕೆಯ ಹಾಟ್​ ಹಾಟ್​ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಹಳದಿ ಹಾಗೂ ಕಪ್ಪು ಬಣ್ಣದ ಬಿಕಿನಿಯಲ್ಲಿ ತೆಗೆದಿದ್ದ ಕ್ಯಾಂಡೀಡ್​ ಫೋಟೊವನ್ನ ನಟಿ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾಗಿಂತಲೂ ನನಗೆ ಮುಖ್ಯವಾದ ಕೆಲಸಗಳು ಬೇರೆಯೇ ಇವೆ. ಆದರೂ ಕೆಲವೊಮ್ಮೆ ವಿರಾಮ ಪಡೆಯಬೇಕಾಗುತ್ತೆ. ಈಗ ನಾನು ಕೆಲಸಕ್ಕೆ ಮರಳಿದ್ದೇನೆ. ನನಗಾಗಿ ಕಾದಿದ್ದಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಇರಾ ಖಾನ್​ ಕೆಲ ದಿನಗಳ ಹಿಂದಷ್ಟೇ ಆಮೀರ್​ ಖಾನ್​ 2ನೇ ಪತ್ನಿಯ ಪುತ್ರ ಆಜಾದ್​ ರಾವ್​ ಖಾನ್​ರ 9ನೇ ವರ್ಷದ ಹುಟ್ಟುಹಬ್ಬಕ್ಕೆ ಹಾಜರಾಗಿದ್ದರು. ಇನ್ಸ್​ಟಾಗ್ರಾಂನಲ್ಲಿ ಆಕೆ ಆಜಾದ್​ ಜೊತೆಗಿನ ಫೋಟೋವನ್ನೂ ಶೇರ್​ ಮಾಡಿದ್ದರು.

ಆಮೀರ್​ ಖಾನ್​ರ ಮೊದಲ ಪತ್ನಿ ರೀನಾ ದತ್ತಾರ ಎರಡನೇ ಮಗಳು ರೀನಾ ಖಾನ್​. ಈ ದಂಪತಿಗೆ ಜುನೈದ್ ಖಾನ್​ ಎಂಬ ಪುತ್ರನೂ ಇದ್ದಾನೆ. 2002ರಲ್ಲಿ ರೀನಾರಿಗೆ ವಿಚ್ಚೇದನ ನೀಡಿದ್ದ ಆಮೀರ್​ ಖಾನ್​ ನಿರ್ಮಾಪಕಿ ಕಿರಣ್​ ರಾವ್​ರನ್ನ ಮದುವೆಯಾಗಿದ್ದರು. ಆಮೀರ್​ ಖಾನ್​ ಹಾಗೂ ಕಿರಣ್​ ರಾವ್​ ದಂಪತಿಗೆ 9 ವರ್ಷದ ಆಜಾದ್ ರಾವ್​ ಖಾನ್​ ಎಂಬ ಪುತ್ರನಿದ್ದಾನೆ.

https://www.instagram.com/p/CIfHaOIg169/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...