
ಈ 15 ಸುಂದರ ವಸಂತದಲ್ಲಿ ನಾವು ಜೀವನಕ್ಕೆ ಸಾಕಾಗುವಷ್ಟು ಅನುಭವ, ಸಂತಸ ಹಾಗೂ ನಗುವನ್ನ ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಹಾಗೂ ಪ್ರೀತಿಯ ನೆಲೆಗಟ್ಟಿನಲ್ಲಿ ಬೆಳೆದಿದೆ. ಆದರೆ ಇದೀಗ ನಾವು ನಮ್ಮ ಜೀವನದ ಹೊಸ ಅಧ್ಯಾಯವನ್ನ ತೆರೆಯಲು ಹೊರಟಿದ್ದೇವೆ. ನಾವು ಇನ್ಮೇಲೆ ಪತಿ – ಪತ್ನಿಯಲ್ಲ. ಆದರೆ ಪೋಷಕರಾಗಿ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.
ಕೆಲ ಸಮಯದ ಹಿಂದಷ್ಟೇ ನಾವು ಬೇರಾಗುವ ಬಗ್ಗೆ ಚಿಂತನೆ ನಡೆಸಿದೆವು. ಇದೀಗ ಈ ಒಪ್ಪಂದವನ್ನ ಅಧಿಕೃತಗೊಳಿಸಿದ್ದೇವೆ. ನಾವು ಇನ್ಮೇಲೆ ಪ್ರತ್ಯೇಕವಾಗಿ ವಾಸಿಸಲಿದ್ದೇವೆ. ಆದರೆ ನಮ್ಮ ಪುತ್ರ ಆಜಾದ್ಗೆ ನಾವು ಪೋಷಕರಾಗಿ ಇರುತ್ತೇವೆ. ಅಲ್ಲದೇ ಸಿನಿಮಾ ಸೇರಿದಂತೆ ವಿವಿಧ ಪ್ರಾಜೆಕ್ಟ್ಗಳಲ್ಲಿ ಜೊತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ನಮ್ಮ ಸಂಬಂಧ ಬೇರಾಗುತ್ತಿರುವುದನ್ನ ಬೆಂಬಲಿಸಿದ ನಮ್ಮ ಕುಟುಂಬಸ್ಥರು, ಸ್ನೇಹಿತರಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆ ಹಾಗೂ ಆರ್ಶೀವಾದ ನಮ್ಮ ಮೇಲೆ ಸದಾ ಇರಲಿ. ಈ ವಿಚ್ಚೇದನವು ಯಾವುದರ ಅಂತ್ಯವಲ್ಲ ಆದರೆ ಹೊಸ ಪ್ರಯಾಣದ ಮುನ್ನುಡಿಯಾಗಿದೆ ಎಂದು ಬರೆಯಲಾಗಿದೆ.