alex Certify 62 ವರ್ಷದ ವೃದ್ಧೆ ಜೀವನೋತ್ಸಾಹ ನೋಡಿದ್ರೆ ಅಚ್ಚರಿಪಡ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

62 ವರ್ಷದ ವೃದ್ಧೆ ಜೀವನೋತ್ಸಾಹ ನೋಡಿದ್ರೆ ಅಚ್ಚರಿಪಡ್ತೀರಿ…!

62 ವರ್ಷದ ರವಿ ಬಾಲಾ ಶರ್ಮಾ ತಾವು ಪೋಸ್ಟ್ ಮಾಡಿದ ಒಂದೇ ಒಂದು ವಿಡಿಯೋದ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಡ್ಯಾನ್ಸಿಂಗ್​ ದಾದಿ ಎಂದೇ ಖ್ಯಾತಿ ಪಡೆದಿರುವ ರವಿ ಬಾಲಾ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ನೃತ್ಯದ ವಿಡಿಯೋ ಸಖತ್​ ವೈರಲ್​ ಆಗಿದೆ.

ಫೆಬ್ರವರಿ 15ರಂದು ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಡ್ಯಾನ್ಸಿಂಗ್​ ದಾದಿ ಸಾಂಪ್ರದಾಯಿಕ ಉಡುಗೆಯನ್ನ ಧರಿಸಿ ಬಾಲಿವುಡ್​ನ ದೇವ್​ದಾಸ್​ ಸಿನಿಮಾದ ಡೋಲಾ ರೇ ಡೋಲಾ ಹಾಡಿಗೆ ನೃತ್ಯ ಮಾಡಿದ್ದಾರೆ.

ಅಂದಹಾಗೆ ಡ್ಯಾನ್ಸಿಂಗ್​ ದಾದಿ ನೆಟ್ಟಿಗರಿಗೇನು ಹೊಸ ಪರಿಚಯವಲ್ಲ. ಕೋವಿಡ್​ 19 ಲಾಕ್​ಡೌನ್​ ಸಂದರ್ಭದಲ್ಲೂ ಇದೇ ರೀತಿ ಸಾಕಷ್ಟು ನೃತ್ಯದ ವಿಡಿಯೋಗಳನ್ನ ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ರವಿ ಬಾಲಾ ಪತಿ ನಿಧನರಾದ ಬಳಿಕ ಖಿನ್ನತೆಗೆ ಜಾರಿದ್ದರಂತೆ. ಆದರೆ ಅವರ ಮಕ್ಕಳು ನೀಡಿದ ಪ್ರೋತ್ಸಾಹದ ಬಳಿಕ ಡ್ಯಾನ್ಸಿಂಗ್​ ದಾದಿ ಇಷ್ಟೊಂದು ಫೇಮಸ್ ಆಗಿದ್ದಾರೆ.

View this post on Instagram

A post shared by Ravi Bala Sharma (@ravi.bala.sharma)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...