alex Certify ʼದಂಗಲ್ʼ‌ಗೆ ನಾಲ್ಕು ವರ್ಷ: ಸ್ವೀಟ್‌ ಮೆಮೋರಿ ಹಂಚಿಕೊಂಡ ನಟಿ ಸಾನ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದಂಗಲ್ʼ‌ಗೆ ನಾಲ್ಕು ವರ್ಷ: ಸ್ವೀಟ್‌ ಮೆಮೋರಿ ಹಂಚಿಕೊಂಡ ನಟಿ ಸಾನ್ಯಾ

ಆಮೀರ್‌ ಖಾನ್ ರ ʼದಂಗಲ್ʼ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿ ಆರಂಭಿಸಿದ್ಧ ಸಾನ್ಯಾ ಮಲ್ಹೋತ್ರಾ, ಈ ಚಿತ್ರದಲ್ಲಿ ಖಾನ್‌‌ ಮಗಳ ಪಾತ್ರದಲ್ಲಿ ಕಾಣಿಸಿಕೊಂಡು, ರಾಷ್ಟ್ರ ಮಟ್ಟದ ಕುಸ್ತಿ ಪಟುವಾಗಿ ಮಿಂಚಿದ್ದರು.

ಈ ಚಿತ್ರ ಬಿಡುಗಡೆಯಾಗಿ ನಾಲ್ಕು ವರ್ಷಗಳು ಕಳೆಯುತ್ತಿದ್ದಂತೆ, ಸಾನ್ಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಒಂದಷ್ಟು ತುಣುಕುಗಳು ಹಾಗೂ ಸ್ಟಿಲ್‌ಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. “4 ಅತ್ಯಂತ ಸುಂದರ ವರ್ಷಗಳು????? #4yearsofdangal” ಎಂದು ಪೋಸ್ಟ್ ಮಾಡಿದ್ದಾರೆ ಸಾನ್ಯಾ.

ಕುಸ್ತಿ ಅಖಾಡದಲ್ಲಿ ಸಾಕಷ್ಟು ಹೆಸರು ಮಾಡಿರುವ ಫೊಗತ್‌ ಸಹೋದರಿಯರ ಜೀವನವನ್ನು ಆಧರಿಸಿದ ಚಿತ್ರವಾದ ದಂಗಲ್ 2016ರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದ್ದು, ಬಾಕ್ಸ್‌ ಆಫೀಸ್ ಹಳೆ ದಾಖಲೆಗಳನ್ನೆಲ್ಲಾ ಪುಡಿಗಟ್ಟಿ ಹೊಸದಾಗಿ ಸೃಷ್ಟಿಸಿತ್ತು.

https://www.instagram.com/p/CJJCtbNr0W0/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...