ಬಾಲಿವುಡ್ನಲ್ಲಿ ತೆರೆ ಕಂಡ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವು ಬಾಕ್ಸಾಫೀಸಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಮಾರ್ಚ್ 18ರಂದು ಬಾಕ್ಸಾಫೀಸಿನಲ್ಲಿ 100 ಕೋಟಿ ರೂಪಾಯಿಗಳನ್ನು ಗಳಿಸಿದ್ದ ಈ ಸಿನಿಮಾವು ಇದೀಗ 200 ಕೋಟಿ ರೂ.ಗಳ ಕ್ಲಬ್ ಸೇರುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದೆ…!
ಸಾಕಷ್ಟು ಅಡೆತಡೆಗಳ ನಡುವೆಯೂ ಈ ಸಿನೆಮಾವು ಮಾರ್ಚ್ 11ರಂದು ದೇಶಾದ್ಯಂತ ರಿಲೀಸ್ ಆಗಿತ್ತು , ಈ ಸಿನಿಮಾವು 1990ರ ದಶಕದಲ್ಲಿ ಕಾಶ್ಮೀರ ದಂಗೆಯ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದೆ. ಈ ಸಿನಿಮಾದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಹಾಗೂ ಪಲ್ಲವಿ ಜೋಶಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾವು ಬಾಕ್ಸಾಫೀಸಿನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡಿದೆ. ಸಿನಿಮಾ ತೆರೆಕಂಡ ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದ್ದ ಈ ಸಿನಿಮಾ ಇದೀಗ 200 ಕೋಟಿ ರೂಪಾಯಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ 200 ಕೋಟಿ ರೂಪಾಯಿ ಕ್ಲಬ್ ಸೇರಿದ ದೇಶದ ಮೊದಲ ಸಿನಿಮಾ ಇದಾಗಿದೆ.
ದಿ ಕಾಶ್ಮೀರ ಫೈಲ್ಸ್ ಸಿನಿಮಾವು 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ, ಅವರು ಅನುಭವಿಸಿದ ನೋವು ಸೇರಿದಂತೆ ಹೃದಯ ವಿದ್ರಾವಕ ಘಟನೆಯನ್ನು ಆಧರಿಸಿದೆ.