
ಪ್ರೇಮ್ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ʼಜೋಗಿʼ ಚಿತ್ರ ತೆರೆ ಕಂಡು ಇಂದಿಗೆ 15 ವರ್ಷ ಪೂರೈಸಿದೆ.
ಈ ಸಿನಿಮಾದಲ್ಲಿ ಜೆನಿಫರ್ ಕೊತ್ವಾಲ್ ನಾಯಕಿಯಾಗಿ ನಟಿಸಿದ್ದರು.
ಭೂಗತ ಜಗತ್ತಿನ ಕಥೆಯಾಧರಿತ ಈ ಸಿನಿಮಾ ಆಗಸ್ಟ್ 19 2005 ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.
ಈ ಚಿತ್ರದ ಹಾಡುಗಳು ಸಹ ಬಾರಿ ಜನಪ್ರಿಯತೆ ಪಡೆದಿದ್ದವು. ಈ ಖುಷಿಯನ್ನು ಶಿವರಾಜ್ ಕುಮಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.